fbpx
ಸಮಾಚಾರ

ಆರ್‌ಸಿಬಿಗೆ ಗುಡ್‌ ಬೈ ಹೇಳಿ ಮುಂಬೈ ಇಂಡಿಯನ್ಸ್ ಸೇರಿಕೊಂಡ ಸ್ಟಾರ್ ಆಟಗಾರ!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ತನ್ನ ತಂಡಕ್ಕೆ ಗುಡ್​ಬಾಯ್ ಹೇಳಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೇರಿಕೊಂಡಿದ್ದಾರೆ. ಆ ಸ್ಟಾರ್​ ಆಟಗಾರ ಯಾರು ಅಂಥ ಗೊತ್ತಾಗ್ಬೇಕಾ ಇಲ್ಲಿದೆ ನೋಡಿ.

 

 

ಕಳೆದ 3 ವರ್ಷಗಳಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದ ಆಟಗಾರನೊಬ್ಬ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತೆಕ್ಕೆಗೆ ಜಾರಿದ್ದಾರೆ. ಹೌದು, ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಇದೀಗ ಸದ್ದಿಲ್ಲದೇ ಮುಂಬೈ ಇಂಡಿಯನ್ಸ್‌ ತಂಡ ಕೂಡಿಕೊಂಡಿದ್ದಾರೆ.

ಐಪಿಎಲ್‌ 2021 ಟೂರ್ನಿ ಸಲುವಾಗಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹೊಸ ಪ್ರತಿಭೆಗಳನ್ನು ಹುಡುಕಿಕೊಡುವ ಕೆಲಸ ವಹಿಸಿಕೊಂಡಿರುವ 35 ವರ್ಷದ ಅನುಭವಿ ಕ್ರಿಕೆಟಿಗ ಪ್ರತಿಭಾನ್ವೇಶಣೆ ಜೊತೆಗೆ ತಂಡದ ಯುವ ಆಟಗಾರರಿಗೆ ತರಬೇತಿ ನೀಡುವ ಕೆಲಸದಲ್ಲೂ ತೊಡಗಿಸಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್‌ ತಿಳಿಸಿದೆ.

“ಮುಂಬೈ ಇಂಡಿಯನ್ಸ್‌ ತಂಡದ ಪರ ಐಪಿಎಲ್‌ನಲ್ಲಿ ಆಡಿದ್ದ ದಿನಗಳನ್ನು ಆನಂದಿಸಿದ್ದೇನೆ. ಚಾಂಪಿಯನ್ಸ್‌ ತಂಡದ ಪರ ಆ ಮೂರು ವರ್ಷಗಳ ಕಾಲ ಆಡಿದ ನೆನಪು ನನ್ನ ಮನದಾಳದಲ್ಲಿ ಅಚ್ಚಳಿಯದಂತೆ ಉಳಿದಿದೆ. ಈಗ ನನ್ನ ಜೀವನದಲ್ಲಿ ಹೊಸ ಇನಿಂಗ್ಸ್‌ ಆರಂಭಿಸುವ ಸಮಯ. ನನಗೆ ಈ ಅವಕಾಶ ಮಾಡಿಕೊಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡದ ಮ್ಯಾನೇಜ್ಮೆಂಟ್‌ಗೆ ಧನ್ಯವಾದ ಹೇಳಬಯಸುತ್ತೇನೆ,” ಎಂದು 2015ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ ಆಡಿದ ಪಾರ್ಥಿವ್‌ ಹೇಳಿಕೊಂಡಿದ್ದಾರೆ.

ಅಂದಹಾಗೆ ಪಾರ್ಥೀವ್ ಪಟೇಲ್ ಕಳೆದ 2018ರ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದರು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಒಂದು ಪಂದ್ಯದಲ್ಲೂ ಆಡುವ ಬಳಗದಲ್ಲಿ ಪಾರ್ಥಿವ್ ಪಟೇಲ್ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಆರ್‌ಸಿಬಿಗೆ ಸೇರ್ಪಡೆಗೊಳ್ಳುವ ಮುನ್ನ 2016 ಹಾಗೂ 2017ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top