fbpx
ಸಮಾಚಾರ

ಜೈಲಿನಿಂದ ಹೊರಬರುವಾಗ ಕ್ಯಾಮೆರಾ ಕಣ್ತಪ್ಪಿಸಲು ನಟಿ ಸಂಜನಾರ ಮಾಸ್ಟರ್ ಪ್ಲಾನ್

ಡ್ರಗ್ಸ್​ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ ಬೆನ್ನಲ್ಲೇ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಈ ಮೂಲಕ 3 ತಿಂಗಳ ಬಳಿಕ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.

ಕ್ಯಾಮೆರಾ ಕಣ್ತಪ್ಪಿಸಲು ತಂತ್ರ
ರಾತ್ರಿ 8 ಗಂಟೆಗೂ ಮೊದಲೇ ಜೈಲಿನಿಂದ ಬಿಡುಗಡೆ ಆಗಿದ್ದ ಸಂಜನಾ ಒಂದು ಗಂಟೆಗೂ ಅಧಿಕ ಕಾಲ ಜೈಲು ಆವರಣದಲ್ಲಿಯೇ ಕಾಲ ಕಳೆದಿದ್ದಾರೆ. 9 ಗಂಟೆ 15 ನಿಮಿಷಕ್ಕೆ ರೆಡ್ ಕಲರ್ ಇನ್ನೋವಾ ಕಾರ್​ನಲ್ಲಿ ಮನೆಯತ್ತ ತೆರಳಿದ್ದಾರೆ. ಕ್ಯಾಮರಾ ಕಣ್ಣು ತಪ್ಪಿಸಿಕೊಳ್ಳಲು ಕಾರ್ ವಿಂಡೋವನ್ನು ಸೀರೆಯಿಂದ ಕವರ್ ಮಾಡಿ ಮುಖ ಕಾಣದಂತೆ ಸಂಜನಾರನ್ನು ಕರೆದೊಯ್ಯಲಾಗಿದೆ.

ಅಂದಹಾಗೆ ವಾಣಿವಿಲಾಸ ಆಸ್ಪತ್ರೆಯ ವೈದ್ಯರ ವರದಿ ಆಧಾರದ ಮೇಲೆ ಸಂಜನಾಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮ೦ಜೂರು ಮಾಡಿದೆ. 3 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾ೦ಡ್‌ ಮತ್ತು ಇಬ್ಬರ ಶ್ಯೂರಿಟಿ, ತಿಂಗಳಲ್ಲಿ 2 ಬಾರಿ ಸಮೀಪದ ಠಾಣೆಗೆ ಹಾಜರಾತಿ ಹಾಕಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top