fbpx
ಸಮಾಚಾರ

ತಿಂಗಳುಗಳ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ನಟಿ ಸಂಜನಾ ಗಲ್ರಾಣಿ

ಡ್ರಗ್ಸ್​ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ ಬೆನ್ನಲ್ಲೇ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಈ ಮೂಲಕ 3 ತಿಂಗಳ ಬಳಿಕ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.

ಮುಖ ಕಾಣದಂತೆ ಕಾರ್ ವಿಂಡೋವನ್ನು ಸೀರೆಯಿಂದ ಕವರ್ ಮಾಡಿ ಸಂಜನಾರನ್ನು ಕರೆದೊಯ್ಯಲಾಗಿದೆ. ರಾತ್ರಿ 8 ಗಂಟೆಗೂ ಮೊದಲೇ ಜೈಲಿನಿಂದ ಬಿಡುಗಡೆ ಆಗಿದ್ದ ಸಂಜನಾ ಒಂದು ಗಂಟೆಗೂ ಅಧಿಕ ಕಾಲ ಜೈಲು ಆವರಣದಲ್ಲಿಯೇ ಕಾಲ ಕಳೆದಿದ್ದಾರೆ. 9 ಗಂಟೆ 15 ನಿಮಿಷಕ್ಕೆ ರೆಡ್ ಕಲರ್ ಇನ್ನೋವಾ ಕಾರ್​ನಲ್ಲಿ ಮನೆಯತ್ತ ತೆರಳಿದ್ದಾರೆ.

ಅಂದಹಾಗೆ ವಾಣಿವಿಲಾಸ ಆಸ್ಪತ್ರೆಯ ವೈದ್ಯರ ವರದಿ ಆಧಾರದ ಮೇಲೆ ಸಂಜನಾಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮ೦ಜೂರು ಮಾಡಿದೆ. 3 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾ೦ಡ್‌ ಮತ್ತು ಇಬ್ಬರ ಶ್ಯೂರಿಟಿ, ತಿಂಗಳಲ್ಲಿ 2 ಬಾರಿ ಸಮೀಪದ ಠಾಣೆಗೆ ಹಾಜರಾತಿ ಹಾಕಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top