fbpx
ಸಮಾಚಾರ

ವಿಷ್ಣುವರ್ಧನ್ ಬಗ್ಗೆ ಕೀಳುಮಟ್ಟದ ಹೇಳಿಕೆ: ದುಷ್ಟ ನಟನಿಗೆ ವಿರುದ್ಧ ಸುದೀಪ್ ಖಡಕ್ ವಾರ್ನಿಂಗ್

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿದೆ. ರಂಗಬಾಬು ವಿರುದ್ಧ ಕ್ರಮಕೈಗೊಳ್ಳುವಂತೆ ಕನ್ನಡ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ವಿಜಯ್ ರಂಗರಾಜು ವಿರುದ್ಧ ನಟ ಜಗ್ಗೇಶ್, ಪುನೀತ್ ರಾಜಕುಮಾರ್, ಅನಿರುದ್ಧ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಡೈರೆಕ್ಟ್ ವಾರ್ನಿಂಗ್ ನೀಡಿದ್ದಾರೆ.

ವಿಡಿಯೋ ನೋಡಿ:

 

 

ಈ ಕುರಿತು ವಿಡಿಯೋ ಮಾಡಿರುವ ಸುದೀಪ್ ಅವರು “ವಿಷ್ಣು ಸರ್ ಬಗ್ಗೆ ವಿಜಯ ರಂಗರಾಜು ತುಂಬಾ ಕೇವಲವಾಗಿ ಮಾತನಾಡಿದ್ದಾರೆ. ಹಾಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ, ಕಲಾವಿದನಾಗಿಯೂ ಹೌದು, ವಿಷ್ಣು ಸರ್ ಅಪ್ಪಟ ಅಭಿಮಾನಿಯಾಗಿಯೂ ಹೌದು, ಇಲ್ಲಾಂದ್ರೆ ಎಲ್ಲಾ ವಿಷ್ಣು ಸರ್ ಅಭಿಮಾನಿಗಳ ಪರವಾಗಿ ಮಾತನಾಡುತ್ತಿದ್ದೇನೆ ಅಂತಲೂ ತಿಳಿದುಕೊಳ್ಳಬಹುದು” ಎಂದು ಹೇಳಿದ್ದಾರೆ.

“ವಿಜಯ ರಂಗರಾಜು ಅವರೇ, ಒಬ್ಬ ವ್ಯಕ್ತಿ ಬಗ್ಗೆ ಏನು ಮಾತನಾಡಬೇಕು ಎಂಬುದು ನಿಮಗೆ ಬಿಟ್ಟ ವಿಚಾರ. ಆದರೆ ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೇ ಅದರಲ್ಲಿ ಗಂಡಸುತನ ಇರುತ್ತಿತ್ತು. ಆದರೆ ಇವತ್ತು ಆ ವ್ಯಕ್ತಿ ನಮ್ಮ ಮದ್ಯೆ ಇಲ್ಲ ಅಂದಾಗ ಈ ರೀತಿ ಮಾತನಾಡೋದು ಬಹಳ ತಪ್ಪು.. ಕೋಟಿ ಕೋಟಿ ಮಂದಿಯಿಂದ ಆರಾಧಿಸಲ್ಪಡುವ ವಿಷ್ಣು ಸರ್ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದು ತುಂಬಾ ತಪ್ಪು” ಎಂದು ಸುದೀಪ್ ಘರ್ಜಿಸಿದ್ದಾರೆ.

“ನಮ್ಮ ಚಿತ್ರರಂಗದ ಒಬ್ಬ ಹಿರಿಯ ಕಲಾವಿದನ ಬಗ್ಗೆ ನೀವು ಈ ರೀತಿ ಮಾತನಾಡಿದ್ದನ್ನು ನಿಮ್ಮ ಚಿತ್ರದವರೇ ಯಾರೂ ಕೂಡ ಒಪ್ಪುವುದಿಲ್ಲ. ‘ಮಾತಿಗೆ ಮುಂಚೆ ಹಾಗೆ ಮಾಡಿದೆ, ಹೀಗೆ ಮಾಡಿದೆ, ಬೆಂಗಳೂರಿಗೆ ಹೋಗಲ್ಲ ಅಂತ ವಾರ್ನಿಂಗ್ ಕೊಟ್ಟೆ ಅಂತೆಲ್ಲಾ ಹೇಳಿದ್ದೀರಿ. ಈ ಮಟ್ಟಕ್ಕೆಲ್ಲಾ ಹೋಗ್ಬೇಡಿ. ಇವತ್ತು ವಿಷ್ಣು ಸರ್ ಇಲ್ಲದೆ ಇರಬಹುದು, ಆದರೆ ನಾವೆಲ್ಲರೂ ಇದ್ದೀವಿ”

“ವಾರ್ನಿಂಗ್ ಕೊಡೋಕೆಲ್ಲಾ ಬರ್ಬೇಡಿ, ಇಲ್ಲಿ ಯಾರೂ ಕೈಲಾಗದವರು ಇಲ್ಲ. ವಿಷ್ಣು ಸರ್ ಇಲ್ಲದೆ ಇರಬಹುದು ಆದರೆ ಕೋಟಿ ಕೋಟಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ನೀವೇನು ಆ ಮಾತು ಹೇಳಿದ್ದೀರಿ ಅದನ್ನ ವಾಪಾಸ್ ತಗೊಂಡು ಕ್ಷಮೆ ಕೇಳಿ” ಎಂದು ಸುದೀಪ್ ಅವರು ವಿಜಯ್ ರಂಗರಾಜುಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಗಂಜರಾಜು ಹೇಳಿದ್ದೇನು?
ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. “ಮುತ್ತೈದೆ ಭಾಗ್ಯ ಚಿತ್ರದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ ಹೇಳಿದ್ರು. ಯಾಕೆ ಕಳಿಸ್ಬೇಕು ಅಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು ವಿಷ್ಣು ವರ್ಧನ್ ಗೆ ಸ್ವಲ್ಪ ಲೇಡೀಸ್ ವೀಕ್‌ನೆಸ್ ಇತ್ತು” ಎಂದಿದ್ದಾನೆ ವಿಜಯ ರಂಗರಾಜು.

“ಕನ್ನಡ ಖೈದಿ ಸಿನಿಮಾ ಶೂಟ್ ಸಂದರ್ಭ ಫೈಟ್ ಸೀನ್ ಶೂಟ್ ಆಗ್ತಿತ್ತು. ಅಲ್ಲಿ ವಿಷ್ಣುವರ್ಧನ್ ನನ್ನ ಭುಜಕ್ಕೆ ಹೊಡೆಯಬೇಕಿತ್ತು, ಆದರೆ ವಿಷ್ಣುವರ್ಧನ್ ನನ್ನ ತಲೆಗೆ ಹೊಡೆದಿದ್ದರು. ಆ ಸಂದರ್ಭ ಕೋಪಗೊಂಡ ನಾನು ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ. ಆ ವೇಳೆ ಸೆಟ್ ನಲ್ಲಿ ಇದ್ದವರು ನನ್ನನ್ನು ಬಿಡಿಸಿದ್ದರು” ಎಂದು ಹೇಳಿದ್ದಾನೆ ವಿಜಯ್ ರಂಗರಾಜು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top