fbpx
ಸಮಾಚಾರ

ನಟಿ ಆರ್ಯ ನಿಗೂಢ ಸಾವಿನ ರಹಸ್ಯ ಬಹಿರಂಗ : ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು

ಇತ್ತೀಚೆಗಷ್ಟೇ ಕೊಲ್ಕತ್ತಾದಲ್ಲಿ ಮೃತರಾದ ಬಾಲಿವುಡ್‌ ನಟಿ ಆರ್ಯಾ ಬ್ಯಾನರ್ಜಿ ಅವರ ಸಾವಿನ ಹಿಂದಿರುವ ರಹಸ್ಯ ಏನೆಂಬುದು ಈಗ ಬಯಲಾಗಿದೆ. ನಟಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಇದು ಕೊಲೆ ಅಲ್ಲ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಅಂತೆ-ಕಂತೆಗಳಿಗೆ ಫುಲ್‌ಸ್ಟಾಪ್‌ ಹಾಕಲಾಗಿದೆ.

ಇದೀಗ ಆರ್ಯ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಇದು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ವರದಿ ಬಹಿರಂಗಪಡಿಸಿದೆ. “ಇದು ಆತ್ಮಹತ್ಯೆ ಅಥವಾ ಕೊಲೆಯಲ್ಲ. ಇವರು ಯಕೃತ್ತಿನ ಸಿರೋಸಿಸ್​ನಿಂದ ಬಳಲುತ್ತಿದ್ದರು. ಅವರ ಹೊಟ್ಟೆಯಲ್ಲಿ ಆಲ್ಕೋಹಾಲ್​ ಕಂಡುಬಂದಿದೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವಿಪರೀತವಾಗಿ ಆಲ್ಕೋಹಾಲ್​ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿದೆ” ಎಂದು ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತ ಮುರಳೀಧರ್ ಶರ್ಮಾ ಹೇಳಿದ್ದಾರೆ.

ಅಂದಹಾಗೆ ಕೋಲ್ಕತಾ ನಿವಾಸದಲ್ಲಿ ತಮ್ಮ ಸಾಕು ನಾಯಿಯ ಜೊತೆ ವಾಸವಿದ್ದರು ಆರ್ಯ. ಬೆಳಗ್ಗೆ ಕೆಲಸದವರು ಬಂದಾಗ ಬಾಗಿಲು ತೆಗೆಯದ ಕಾರಣ ಅಪಾರ್ಟ್‌ಮೆಂಟ್‌ ಮಾಲೀಕರಿಗೆ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ರಕ್ತದ ಮಡುವಿನಲ್ಲಿ ಶವ ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top