fbpx
ಸಮಾಚಾರ

ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರ ವಿಚಾರ: ದೂರು ದಾಖಲು

ನಟಿ ಸಂಜನಾ ಗಲ್ರಾ​ನಿ​ಯನ್ನು ಬಲ​ವಂತ​ವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡ​ಲಾ​ಗಿದೆ ಎಂದು ಆರೋ​ಪಿಸಿ ವಕೀಲ ಎನ್‌.​ಪಿ.​ಅ​ಮೃ​ತೇಶ್‌ ಅವರು ಗೃಹ ಸಚಿವ ಬಸ​ವ​ರಾಜ ಬೊಮ್ಮಾಯಿ, ಕಾಟನ್‌ ಪೇಟೆ ಪೊಲೀಸ್‌ ಠಾಣೆ, ಕೇಂದ್ರ ಅಪ​ರಾಧ ವಿಭಾ​ಗ​ದ (​ಸಿ​ಸಿ​ಬಿ) ಪೊಲೀ​ಸ​ರಿಗೆ ರಿಜಿ​ಸ್ಟರ್‌ ಪೋಸ್ಟ್‌ ಮೂಲಕ ದೂರು ನೀಡಿ​ದ್ದಾರೆ.

ಸಂಜನಾ ರನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ, ಸಂಜನಾ ಹೆಸರನ್ನು ‘ಮಹಿರಾ’ ಎಂದು ಬದಲಾಯಿಸಲಾಗಿದೆ. ಈ ಬಲವಂತದ ಮತಾಂತರ ಮಾಡಿರುವುದು ಟ್ಯಾನರಿ ರಸ್ತೆಯ ದಾರುಲ್ ಉಲುಮ್ ಶಾ ವಲಿಯುಲ್ಲಾ ಮದರಸಾದ ಮೌಲ್ವಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ.

ಅಂದಹಾಗೆ ನಟಿ ಸಂಜನಾ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಅಜೀಜ್ ಎನ್ನುವವರೊಂದಿಗೆ ಮದುವೆಯಾಗಿದ್ದರೆಂದು ಹೇಳಲಾಗುವ ಫೋಟೋ ಒಂದು ಕೆಲ ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು, ಆ ವೇಳೆ ಸಂಜನಾ ಇಸ್ಲಾಂಗೆ ಮತಾಂತರವಾಗಿ ಹೆಸರು ಬದಲಿಸಿಕೊಂಡಿದ್ದರೆಂಬ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿತ್ತು. ಈ ನಡುವೆ ಜೈಲಿನಿಂದ ಹೊರಬಂದಿರುವ ಸಂಜನಾ ತಾವು ಯಲಹಂಕ ಬಳಿಯ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top