fbpx
ಸಮಾಚಾರ

ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರಿಗೆ ನಟ ಸೋನು ಸೂದ್ ಕಡೆಯಿಂದ ಆಫ಼ರ್

ಕೊರೋನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ, ಬಡವರಿಗೆ ನಿರಂತರ ನೆರವು ನೀಡಿಕೊಂಡು ಬಂದಿರುವ ನಟ ಸೋನು ಸೂದ್ ಮತ್ತೊಂದು ದೊಡ್ಡ ಕೆಲಸಕ್ಕೆ ಮುಂದಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸದಿಂದ ಕಳೆದುಕೊಂಡವರಿಗೆ ಇ-ರಿಕ್ಷಾಗಳನ್ನು ನೀಡುವ ಮೂಲಕ ಮತ್ತೊಮ್ಮೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ವಿವರಣೆ ನೀಡಿದ್ದು ಕಾರ್ಯಕ್ರಮವನ್ನು ‘ಖುದ್ ಕಾಮಾವ್, ಘರ್ ಚಲಾವ್’ ಎಂದು ಕರೆದಿದ್ದಾರೆ. ಜನರಿಂದ ದೊರೆಯುತ್ತಿರುವ ಪ್ರೀತಿಯೇ ಇಂಥ ಕೆಲಸ ಮಾಡಲು ಪ್ರೇರಣೆ ಎಂದು ಹೇಳಿದ್ದಾರೆ.

 

 

‘ಕಳೆದ ಕೆಲವು ತಿಂಗಳುಗಳಿಂದ ನಾನು ಜನರಿಂದ ಸಾಕಷ್ಟು ಪ್ರೀತಿಯನ್ನು ಸ್ವೀಕರಿಸಿದ್ದೇನೆ. ಮತ್ತು ಅದು ಅವರಿಗಾಗಿ ಮುಂದುವರಿಯಲು ನನ್ನನ್ನು ಪ್ರೇರೇಪಿಸಿದೆ. ಹಾಗಾಗಿ, ನಾನು ‘ಖುದ್ ಕಮಾವೊ ಘರ್ ಚಾಲಾವೊ’ ಉಪಕ್ರಮವನ್ನು ಪ್ರಾರಂಭಿಸಿದ್ದೇನೆ.ಸರಬರಾಜುಗಳನ್ನು ವಿತರಿಸುವುದಕ್ಕಿಂತ ಉದ್ಯೋಗಾವಕಾಶಗಳನ್ನು ಒದಗಿಸುವುದು ಮುಖ್ಯ ಎಂದು ನಾನು ನಂಬುತ್ತೇನೆ. ಈ ಉಪಕ್ರಮವು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎನ್ನುವ ಖಾತ್ರಿ ಇದೆ’ ಎಂದು ಸೋನು ಸೂದ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top