fbpx
ಸಮಾಚಾರ

ನಾಲ್ಕು ದಿನಗಳ ಬಸ್ ನೌಕರರ ಮುಷ್ಕರದಿಂದ ಸರ್ಕಾರಕ್ಕೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ?

ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸಾರಿಗೆ ಸಿಬ್ಬಂದಿಯು ಕಳೆದ 4 ದಿನಗಳಿಂದ ರಾಜ್ಯಾದ್ಯಂತ ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರಿಂದ ಸಾರಿಗೆ ನಿಗಮಗಳಿಗೆ ಬರೋಬ್ಬರಿ 58 ಕೋಟಿ ರೂ. ನಷ್ಟ ಉಂಟಾಗಿದೆ. ​ ಹಾಗಾದ್ರೆ ಪ್ರತ್ಯೇಕವಾಗಿ KSRTC, BMTC, NEKRTC ಹಾಗೂ NWKRTC ಸಂಸ್ಥೆಗಳಿಗೆ ಎಷ್ಟು ನಷ್ಟ ಉಂಟಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

KSRTC:
ರಾಜ್ಯದಲ್ಲಿ ಒಟ್ಟು 6 ಸಾವಿರ KSRTC ಬಸ್ಸುಗಳ ಸಂಚಿರುತ್ತವೆ. ಸುಮಾರು 7 ಕೋಟಿ ರೂ. ಪ್ರತಿದಿನ ಕಲೆಕ್ಷನ್ ಇದೆ. ಮುಷ್ಕರದ ಸಮಯದಲ್ಲಿ ಕೆಲವು ‌ಬಸ್ಸುಗಳು ಸಂಚಾರ ಮಾಡಿದನ್ನು ಹೊರತುಪಡಿಸಿ್ದಾರೆ, 4 ದಿನದ ಸಾರಿಗೆ ನೌಕರರ ಮುಷ್ಕರದಿಂದ KSRTCಗೆ ಸುಮಾರು 20 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

BMTC:
ಪ್ರತಿದಿನ 4,900 ರಿಂದ 5,000 BMTC ಬಸ್​ಗಳು ಸಂಚಾರ ಮಾಡುತ್ತವೆ. ದಿನಕ್ಕೆ ಒಟ್ಟು 2 ಕೋಟಿ ರೂ.ಆದಾಯಗಳಿಸುತ್ತವೆ. 4 ದಿನದ ಮುಷ್ಕರದಿಂದ ಅಂದಾಜು BMTC ಸುಮಾರು 7 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

NEKRTC:
ಪ್ರತಿದಿನ 3,775 NEKRTC ಬಸ್​ಗಳು ಸಂಚಾರ ಮಾಡುತ್ತವೆ. ದಿನಕ್ಕೆ ಸುಮಾರು 4 ಕೋಟಿ ಆದಾಯಗಳಿಸುತ್ತದೆ. ಮುಷ್ಕರದಿಂದಾಗಿ ಒಟ್ಟು 12 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ..

NWKRTC:
ಪ್ರತಿದಿನ ಒಟ್ಟು 3,402 NWKRTC ಬಸ್ಸುಗಳು ಸಂಚಾರ ಮಾಡುತ್ತವೆ . ಒಟ್ಟು 4 ಕೋಟಿ 20ಲಕ್ಷ ರೂ. ಆದಾಯಗಳಿಸುತ್ತದೆ. ನೌಕರರ ಮುಷ್ಕರದಿಂದ ಒಟ್ಟು 14 ಕೋಟಿ 50ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top