fbpx
ಸಮಾಚಾರ

ನಟಿಯ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್ ಟ್ವೀಸ್ಟ್: ಗುಟ್ಟಾಗಿ ಮದುವೆಯಾಗಿದ್ದ ಪತಿ ಅರೆಸ್ಟ್

ಪ್ರಸಿದ್ಧ ತಮಿಳು ನಟಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ನಟಿಯ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ನಟಿ ಮತ್ತು ನಿರೂಪಕಿ ಚೈತ್ರಾ ಅವರು ಚೆನ್ನೈನ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ನಟಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಕ್ಕೆ ಪತಿಯನ್ನು ಅರೆಸ್ಟ್ ಮಾಡಲಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವುದು ಸಾಬೀತಾಗಿದ್ದು, ಹಣಕಾಸಿನ ಸಮಸ್ಯೆ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಎಂದು ಹೇಳಲಾಗುತ್ತಿದೆ. ಬಂಧಿತನಾಗಿರುವ ನಟಿಯ ಪತಿ ಹೇಮಂತ್, ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ಧಾನೆ.

ಡಿಸೆಂಬರ್ 9 ರಂದು ಚೆನ್ನೈನ ನಜರೀತ್ ಪೆಟೈ ಎಂಬ ಖಾಸಗಿ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಚಿತ್ರಾ ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, 6 ದಿನಗಳ ವಿಚಾರಣೆ ಬಳಿಕ ನಟಿ ಚಿತ್ರಾಳ ಪತಿ ಹೇಮಂತ್ ಆತ್ಮಹತ್ಯೆಗೆ ಪ್ರಚೋಧನೆ ನೀಡಿದ್ದಾನೆ ಎಂಬ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ನಟಿ ಚೈತ್ರಾ ಹಾಗೂ ಹೇಮಂತ್ ವಿವಾಹವಾಗಿದ್ದರು. ಇಬ್ಬರ ಸಂಪ್ರದಾಯಿಕ ವಿವಾಹ ಜನವರಿಯಲ್ಲಿ ನಡೆಯಬೇಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top