fbpx
ಸಮಾಚಾರ

ಎರಡನೇ ಬಾರಿ ತಂದೆಯಾದ ನಟ, ಬಿಗ್‌ ಬಾಸ್‌ ಖ್ಯಾತಿಯ ಹರೀಶ್‌ ರಾಜ್‌!

ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಕೆಲಸ ಮಾಡಿರುವ ನಟ ಹರೀಶ್​ ರಾಜ್​. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಪ್ರೇಕ್ಷಕರನ್ನು ರಂಜಿಸುವ ಹರೀಶ್​ ರಾಜ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ.

ಹರೀಶ್ ರಾಜ್ ಅವರು ಎರಡನೇ ಬಾರಿಗೆ ತಂದೆ ಆಗಿದ್ದಾರೆ. ಹರೀಶ್‌ ರಾಜ್‌ ಪತ್ನಿ ಶ್ರುತಿ ಲೋಕೇಶ್‌ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸಮಾಚಾರವನ್ನು ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ ಬಿಗ್‌ ಬಾಸ್‌ ಖ್ಯಾತಿಯ ಹರೀಶ್‌ ರಾಜ್‌. ‘ಮಗಳು ಜನಿಸಿದ್ದಾಳೆ. ನಿಮ್ಮೆಲ್ಲರ ಹಾರೈಕೆಗಳು ಬೇಕು’ ಎಂದು ಪೋಸ್ಟ್‌ ಮಾಡಿಕೊಂಡಿದ್ದಾರೆ.

ಹರೀಶ್​ ರಾಜ್​ ಹಾಗೂ ಶ್ರುತಿ ಅವರಿಗೆ 2014ರಲ್ಲಿ ವಿವಾಹವಾಗಿತ್ತು. ಹರೀಶ್‌-ಶ್ರುತಿ ದಂಪತಿಗೆ ಈಗಾಗಲೇ ಸಾನಿಧ್ಯ ಎಂಬ ಮಗಳಿದ್ದಾಳೆ. ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹರೀಶ್‌ ರಾಜ್‌ ಕೆಲವೇ ದಿನಗಳ ಹಿಂದೆ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top