fbpx
ಸಮಾಚಾರ

ಜಾಮೀನು ಸಿಕ್ಕ ಬಳಿಕ ನಾಪತ್ತೆಯಾಗಿದ್ದ ನಟಿ ಸಂಜನಾ ಗಲ್ರಾನಿ ಮೊದಲ ಬಾರಿಗೆ ಪ್ರತ್ಯಕ್ಷ

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾಣಿ ಬರೋಬ್ಬರಿ 3 ತಿಂಗಳು ಸೆರೆಮನೆವಾಸ ಅನುಭವಿಸಿದ್ದರು. ಮೊದಲ ದಿನದಿಂದಲೇ ಜಾಮೀನಿಗಾಗಿ ಹೋರಾಡುತ್ತಿದ್ದ ಸಂಜನಾ ಕೊನೆಗೂ ಬೇಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 85 ದಿನಗಳ ಬಳಿಕ ಜೈಲಿನಿಂದ ಹೊರಬಂದ ಸಂಜನಾ ಯಾರ ಕಣ್ಣಿಗೂ ಕಾಣಿಸದೇ ಗೌಪ್ಯವಾಗಿದ್ದರು. ಇದೀಗ ಸಂಜನಾ ಗಲ್ರಾಣಿ ಪ್ರತ್ಯಕ್ಷರಾಗಿದ್ದಾರೆ.

ಸಂಜನಾ ಗಲ್ರಾನಿ ತಮ್ಮ ಜಾಮೀನಿಗೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಲು ಎನ್​ಡಿಪಿಎಸ್​ ವಿಶೇಷ ಕೋರ್ಟ್​​ ಎದುರು ಹಾಜರಾಗಿದ್ದರು. ಸಂಜನಾಗೆ ಶ್ಯೂರಿಟಿ ನೀಡಲು ಹೈಕೋರ್ಟ್ ಪೀಠ ಸೂಚಿಸಿತ್ತು. ಈ ಹಿನ್ನೆಲೆ ಕೋರ್ಟ್​ಗೆ ಶ್ಯೂರಿಟಿ ನೀಡಲು ಪರ್ಸನಲ್ ಆಗಿ ಬರಬೇಕಿತ್ತು. ಅದರಂತೆ ನಟಿ ಸಂಜನಾ ಗಲ್ರಾನಿ ಇಬ್ಬರ ಶ್ಯೂರಿಟಿ ನೀಡಿದ್ದಾರೆ.

ಸಂಜನಾ ಎನ್ ಡಿ ಪಿ ಎಸ್ ಕೋರ್ಟ್‌ಗೆ ಹಾಜರಾಗುವ ವೇಳೆ ಮಾಧ್ಯಮದ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಜಾಮೀನು ಷರತ್ತು ಪ್ರಕ್ರಿಯೆ ಮುಗಿಸಲು ಎನ್ಡಿಪಿಎಸ್ ಕೋರ್ಟ್ ಗೆ ಸಂಜನಾ ಹಾಜರಾಗಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ಬಿಲ್ಡಿಂಗ್‌ನಲ್ಲಿರುವ ಎನ್‌ಡಿಪಿಎಸ್ ಸ್ಪೆಷಲ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಷರತು ಪ್ರಕ್ರಿಯೆ ಹಾಗೂ ಕೆಲ ದಾಖಲೆ ಪತ್ರಗಳ ಪ್ರಕ್ರಿಯೆ ಮುಗಿಸಿದ್ದಾರೆ.

ಮೂಲಗಳ ಪ್ರಕಾರ, ತನಿಖೆ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಮಾಧ್ಯಮದವರ ಜೊತೆಗೆ ಮಾತನಾಡಬಾರದು ಮತ್ತು ಯಾವುದೇ ಅಭಿಪ್ರಾಯಗಳನ್ನು ಹಂಚಿಕೊಳ್ಳಬಾರದು ಎಂಬುದಾಗಿ ಸಂಜನಾಗೆ ಷರತ್ತು ವಿಧಿಸಲಾಗಿದೆ. ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಮನೆಯಲ್ಲೇ ಇದ್ದುಕೊಂಡು, ವೈದ್ಯರ ಸಲಹೆ ಮೇರೆಗೆ ಸಂಜನಾ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top