fbpx
ಸಮಾಚಾರ

ಡ್ರಗ್​ ಪ್ರಕರಣ: ಬಾಲಿವುಡ್​ ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ಗೆ ಸಮನ್ಸ್​

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ಅವರಿಗೆ ಎನ್‌ಸಿಬಿ ನೋಟಿಸ್‌ ಜಾರಿ ಮಾಡಿದೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ಮಾದಕವಸ್ತು ಜಾಲದ ಬಗ್ಗೆ ಎನ್‌ಸಿಬಿ ತನಿಖೆ ನಡೆಸುತ್ತಿದ್ದು ಈ ಸಂಬಂಧ ಒರಮುಖ್ಯ ಮಾಹಿತಿ ಕಲೆ ಹಾಕಲು ನಿರ್ಮಾಪಕ ಕರಣ್ ಜೋಹರ್‌ಗೆ ಸಮನ್ಸ್ ನೀಡಿದೆ.

2019ರಂದು ಜುಲೈನಲ್ಲಿ ಕರಣ್ ಮನೆಯಲ್ಲಿ ನಡೆದ ಪಾರ್ಟಿಯ ವಿಚಾರವಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಮಹತ್ವದ ವಿಚಾರ ಕಲೆ ಹಾಕುತ್ತಿರುವ ಎನ್‌ಸಿಬಿ ನಿರ್ದೇಶಕನಿಗೆ ನೋಟಿಸ್ ಕಳುಹಿಸಿದೆ. ಇಷ್ಟೇ ಅಲ್ಲದೆ ಘಟನೆಗೆ ಸಂಬಂಧಿಸಿ ಎಲೆಕ್ಟ್ರಾನಿಕ್ ಡಿವೈಸ್‌ಗಳ ಸಾಕ್ಷಿ ಮಾಹಿತಿ ಒದಗಿಸಲೂ ಸೂಚನೆ ನಿಡಲಾಗಿದೆ.

ಬಾಲಿವುಡ್​ನ ಸಾಕಷ್ಟು ನಟ-ನಟಿಯರಿಗೆ ಕರಣ ಜೋಹರ್​ ಆಪ್ತರಾಗಿದ್ದಾರೆ. ಈಗಾಗಲೇ ಡ್ರಗ್​ ವಿಚಾರಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿ ಬಂದವರ ಜೊತೆಗೂ ಕರಣ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಕೆಲ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಉದ್ದೇಶದಿಂದ ಕರಣ್​ ಜೋಹರ್​ಗೆ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಕರಣ್ ಜೋಹರ್​ಗೆ ಎನ್​ಸಿಬಿ ಪ್ರಶ್ನಾವಳಿ ಕಳುಹಿಸಿದೆ. ಪ್ರಶ್ನೆಗಳಿಗೆ ನಾಳೆಯೊಳಗೆ ಉತ್ತರ ಕಳಿಸಲು ಸೂಚಿಸಿದೆ. ಹೀಗಾಗಿ ಅವರು, ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ.

ಈ ಕ್ರಮ ಕಳೆದ ಎರಡು ತಿಂಗಳುಗಳಿಂದ ಎನ್‌ಸಿಬಿ ತೆರೆದಿಡಲು ಪ್ರಯತ್ನಿಸುತ್ತಿರುವ ಬಾಲಿವುಡ್-ಡ್ರಗ್ಸ್ ಮಾಫಿಯಾ ಲಿಂಕ್ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿದೆ. ಈ ವರ್ಷದ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ನಂತರ ಬಾಲಿವುಡ್ ನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಏತನ್ಮಧ್ಯೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬುಧವಾರ ನಟ ಅರ್ಜುನ್ ರಾಂಪಾಲ್ ಅವರನ್ನು ವಿಚಾರಣೆಗೆ ಆಹ್ವಾನಿಸಿತ್ತು. ಆದರೆ ನಟ ತಮಗೆ ಒಂದು ವಾರದ ಸಮಯವನ್ನು ನೀಡುವಂತೆ ಕೋರಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ವೈಯುಕ್ತಿಕ ಕಾರಣದಿಂದಾಗಿ ವಾರದ ಕಾಲ ಸಮಯ ಕೇಳಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top