fbpx
ಸಮಾಚಾರ

ಮದುವೆಯಾದ ಎರಡೇ ತಿಂಗಳಿಗೆ ಸಿಹಿ ಸುದ್ದಿ ನೀಡಿದ ‘ಕೆಜಿಎಫ್’ ಗಾಯಕಿ ನೇಹಾ ಕಕ್ಕರ್

ಕೆಜಿಎಫ್‌: ಚಾಪ್ಟರ್‌ 1’ರ ಹಿಂದಿ ವರ್ಷನ್‌ನಲ್ಲಿ ‘ಗಲಿ ಗಲಿ ಮೇ..’ ಹಾಡು ಹೇಳಿದ್ದ ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್‌ ಮದುವೆಯಾದ ಎರಡೇ ತಿಂಗಳಿಗೆ ಅಭಿಮಾನಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

 

 

ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಹಂಚಿಕೊಂಡ ಆ ಒಂದು ಪಿಕ್ ಈಗ ನೇಹಾ ಅಭಿಮಾನಿ ಬಳಗಕ್ಕೆ ಅಚ್ಚರಿ ಮೂಡಿಸಿದೆ. ಸಿಂಗರ್ ಕಪಲ್ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್​ಗೆ ಬಾಲಿವುಡ್​ನ ಸಿನಿಮಾ ಮಂದಿ, ಗಾಯಕರಿಂದ ಶುಭಾಶಯಗಳ ಸುರಿ ಮಳೆಯೇ ಹರಿದು ಬರುತ್ತಿದೆ. ಹೌದು ನೇಹಾ ಕಕ್ಕರ್ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋವನ್ನು ಫೋಸ್ಟ್ ಮಾಡಿದ್ದಾರೆ. ಇದರಂತೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿದೆ.

ನೇಹಾ ಪೋಸ್ಟ್‌ನಲ್ಲಿ ಏನೂ ತಿಳಿಸದಿದ್ದರೂ, #KhyaalRakhyaKar(ಕಾಳಜಿವಹಿಸು) ಎಂದು ಬರೆದಿದ್ದಾರೆ. ಈ ಜೋಡಿ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಲ್ಲ. ಆದರೆ ಇದು ಹಿಂಟ್ ಕೊಟ್ಟಿದ್ದಾ ಅನ್ನೋ ಡೌಟ್ ಎಲ್ಲರಲ್ಲೂ ಇದೆ. ಬಹಳಷ್ಟು ಜನ ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನೊಂದಷ್ಟು ಜನ ನೀವು ಪ್ರೆಗ್ನೆಂಟ್ ಆಗಿದ್ರೆ ಕನ್ಫರ್ಮ್ ಮಾಡಿ ಎಂದಿದ್ದಾರೆ. ನೇಹಾ ಅವರು ಈ ವಿಚಾರವನ್ನು ಇನ್ನಷ್ಟೇ ಅಧಿಕೃತಗವಾಗಿ ಹೇಳಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top