fbpx
ಸಮಾಚಾರ

ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಆಫರ್ ನೀಡಿದ ನಿತ್ಯಾನಂದ: ಉಚಿತ ಪ್ರಯಾಣ, ಊಟ

ಭಾರತದಿಂದ ಪರಾರಿಯಾಗಿ ದೂರದ ದಕ್ಷಿಣದ ಅಮೆರಿಕದ ದೇಶ ಈಕ್ವೆಡಾರ್‌ನಲ್ಲಿ ಕೈಲಾಸವೆಂಬ ದೇಶ ರಚನೆಯ ಘೋಷಣೆ ಮಾಡಿರುವ ನಿತ್ಯಾನಂದ, ಇದೀಗ ಭಕ್ತರಿಗೆ ತನ್ನ ಕೈಲಾಸ ದೇಶಕ್ಕೆ ಭೇಟಿ ನೀಡುವ ಆಫರ್‌ ಮುಂದಿಟ್ಟಿದ್ದಾನೆ. ಅದೂ ಸಂಪೂರ್ಣ ಉಚಿತವಾಗಿ!

ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರು ವೀಸಾ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿರುವ ನಿತ್ಯಾನಂದ, ಈ ಪ್ರಕ್ರಿಯೆಯ ಹಂತಗಳನ್ನೂ ವಿವರಿಸಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿವರಿಸಿದ್ದಾನೆ. ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ.

ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ. ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಬಂದು, ಅಲ್ಲಿಂದ ಚಾರ್ಟರ್ಡ್ ವಿಮಾನದಲ್ಲಿ ಕೈಲಾಸಕ್ಕೆ ಬರುವ ಬಗೆಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾನೆ.

ಕೈಲಾಸಕ್ಕೆ ಬರಲು ಗರುಡ ಎಂಬ ವಿಶೇಷ ವಿಮಾನ ಸೇವೆ ಆಸ್ಟ್ರೇಲಿಯಾದಿಂದ ಇರುವುದಾಗಿ ತಿಳಿಸಿದ್ದಾನೆ. ಕೈಲಾಸದಲ್ಲಿ ನೆಲೆಸುವವರಿಗೆ ಉಚಿತ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾನೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top