fbpx
ಸಮಾಚಾರ

‘ರಾಬರ್ಟ್’ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್: 7 ಜನರ ಬಂಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ಕು ಜನರ ಕೊಲೆಗೆ ಸ್ಕೆಚ್ ಹಾಕಿದ್ದ 7ಜನ ಆರೋಪಿಗಳನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಿರ್ಮಾಪಕರಾದ ಉಮಾಪತಿ, ದೀಪಕ್ ಹಾಗೂ ರೌಡಿಗಳಾದ ಸೈಕಲ್ ರವಿ, ಬೇಕರಿ ರಘುನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿಗಳಾದ ದರ್ಶನ್, ರಾಜನ್, ಗಿರೀಶ್, ಮೋಹನ್ ಹಾಗೂ ಟೋನಿ ಜೋಸೆಫ್ ಸೇರಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಂಚು ರೂಪಿಸುತ್ತಿದ್ದ ಬೆಂಗಳೂರಿನ ದರ್ಶನ್‌, ರಾಜನ್‌, ಗಿರೀಶ್‌, ಮೋಹನ್‌ ಹಾಗೂ ಟೋನಿ ಜೊಸೇಫ್‌ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ, ಟೆಂಪೋ ಟ್ರಾವೆಲರ್‌ ಹಾಗೂ ಬೈಕನ್ನು ಜಪ್ತಿ ಮಾಡಿದ್ದೇವೆ. ಸಂಚಿನ ಸೂತ್ರಧಾರಿಗಳಾದ ರೌಡಿಶೀಟರ್‌ ಬಾಂಬೆ ರವಿ ಹಾಗೂ ಭರತ್‌ ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವ ಕಾರಣಕ್ಕೆ ನಿರ್ಮಾಪಕರ ಹತ್ಯೆಗೆ ಹೊಂಚು ಹಾಕುತ್ತಿದ್ದರು ಎಂಬುದು ಗೊತ್ತಾಗಿಲ್ಲ. ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು, ನಿರ್ಮಾಪಕರಾದ ಉಮಾಪತಿ, ದೀಪಕ್‌ ಹಾಗೂ ಕುಖ್ಯಾತ ರೌಡಿಶೀಟರ್‌ಗಳಾದ ಸೈಕಲ್‌ ರವಿ ಮತ್ತು ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಹಣಕಾಸಿನ ವಿಚಾರಕ್ಕೆ ನಿರ್ಮಾಪಕರ ಹತ್ಯೆಗೆ ಈ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಸಿನಿಮಾಗೆ ಬಂಡವಾಳ ಹೂಡುವ ವಿಷಯಕ್ಕೆ ಹಣಕಾಸಿನ ವಿಚಾರವೋ ಅಥವಾ ಜಮೀನಿನ ವಿಷಯವೋ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬರಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top