ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ಜನವರಿ 8, 2021ರ೦ದು ಬೆಳಗ್ಗೆ 10.18ಕ್ಕೆ ಬಿಡುಗಡೆಯಾಗಲಿದೆ. ಈ ಸಂಗತಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಘೋಷಿಸಿದ್ದಾರೆ.
ರಾಕಿ೦ಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮೊದಲ ಭಾಗ ತೆರೆಕ೦ಡು ಇ೦ದಿಗೆ ಮೂರು ವರ್ಷ. ಆದ್ರೆ ಮೂರು ವರ್ಷವಾದ್ರು ಕಥೆಯ ತಾಜಾತನ ಅಭಿಮಾನಿಗಳ ಕಣ್ಮುಂದೆ ಇನ್ನು ಹಾಗೇ ಇದೆ. ಇನ್ನೂ ಎರಡನೇ ಭಾಗಕ್ಕಾಗಿ ತುದಿಕಾಲಲ್ಲಿ ನಿಂತು ಕಾಯುತ್ತಿರೋ ಅಭಿಮಾನಿಗಳಿಗೆ ಕೆಜಿಎಫ್ ಸೂತ್ರದಾರ ಪ್ರಶಾ೦ತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ.
A glance into the Empire 💥
It might have taken a year longer for this, but we are coming stronger, bigger & deadlier!#KGFChapter2TeaserOnJan8 at 10:18 AM on @hombalefilms youtube.@VKiragandur @TheNameIsYash @duttsanjay @TandonRaveena @SrinidhiShetty7 @BasrurRavi @bhuvangowda84 pic.twitter.com/evCn5jiBkn— Prashanth Neel (@prashanth_neel) December 21, 2020
“ಸಾಮ್ರಾಜ್ಯದ ಒಂದು ಝಲಕ್.. ಇದಕ್ಕಾಗಿ ಒಂದು ವರ್ಷ ಹೆಚ್ಚಿನ ಸಮಯ ಹಿಡಿಯಿತು. ಆದ್ರೆ ನಾವು ಮತ್ತಷ್ಟು ಸ್ಟ್ರಾಂಗರ್, ಬಿಗ್ಗರ್ ಹಾಗೂ ಡೆಡ್ಲಿಯರ್ ಆಗಿ ಬರುತ್ತಿದ್ದೇವೆ. ಜನವರಿ 8ರಂದು ಬೆಳಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್ನಲ್ಲಿ ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್ ಆಗಲಿದೆ.” ನಿರ್ದೇಶಕರು ಹೇಳಿದ್ದಾರೆ.
ಅಂದಹಾಗೆ ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವಾಗಿದ್ದು, ಅಂದೇ ಟೀಸರ್ ಬಿಡುಗಡೆಯಾಗ್ತಿರೋದು ಮತ್ತೊಂದು ವಿಶೇಷವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
