fbpx
ಸಮಾಚಾರ

ರಿಯಲ್ ಹೀರೊ ಸೋನು ಸೂದ್ ಗಾಗಿ ದೇವಾಲಯ ಕಟ್ಟಿದ ಅಭಿಮಾನಿಗಳು

ಕೊರೊನಾ ವೈರಸ್ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ತಮ್ಮ ‘ನಿಸ್ವಾರ್ಥ ಕಾರ್ಯ’ದಿಂದಾಗಿ ರಿಯಲ್ ಹೀರೊ ಎನಿಸಿಕೊಂಡಿದ್ದ ನಟ ಸೋನು ಸೂದ್ ಇದೀಗ ಹಲವರ ಪಾಲಿನ ದೇವರಾಗಿದ್ದಾರೆ. ಹೌದು, ಡಿಸೆಂಬರ್ 20 ರಂದು ತೆಲಂಗಾಣದ ಸಿದ್ದಿಪೇಟೆಯಲ್ಲಿ ಸೋನು ಸೂದ್‌ಗಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.

ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ದುಬ್ಬ ತಂಡ ಗ್ರಾಮದ ಜನರು ನಟ ಸೋನು ಸೂದ್​ ಮಾಡಿರುವ ಸಹಾಯವನ್ನು ನೆನೆದು ದೇವಸ್ಥಾನ ಕಟ್ಟಿಸಿದ್ದಾರೆ. ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಅನೇಕರು ಸಂಕಷ್ಟ ಎದುರಿಸಿದ್ದರು. ಆಹಾರ, ನೀರು, ವಸತಿಯಿಲ್ಲದೆ ಪರದಾಡಿದ್ದರು. ಈ ಸಮಯಲ್ಲಿ ಬಾಲಿವುಡ್​​ ಖ್ಯಾತ ನಟ ಸೋನು ಸೂದ್​ ಸಂಕಷ್ಟದಲ್ಲಿದ್ದವರ ಸಹಾಯಕ್ಕೆ ಬೆನ್ನೆಲುಬಾಗಿ ನಿಂತಿರು. ಅವರಿಗೆ ನೀರು, ಆಹಾರ ಒದಗಿಸುವ ಮಾತ್ರವಲ್ಲದೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದರು. ಇವರ ಸಹಾಯವನ್ನು ಅನೇಕರು ಸ್ಮರಿಸಿದ್ದಾರೆ. ಇದೀಗ ತೆಲಂಗಾಣದ ಜನರು ಸೋನು ಸೂದ್​ ಮಾಡಿರುವ ಸಹಾಯಕ್ಕೆ ದೇವಸ್ಥಾನವನ್ನು ಕಟ್ಟಿಸಿ ಧನ್ಯವಾದ ತಿಳಿಸಿದ್ದಾರೆ.

ತೆಲಂಗಾಣದ ಸಿದ್ದಿಪೇಟ್​​ನಲ್ಲಿರೋ ಡುಬ್ಬಾ ತಾಂಡಾದ ಜನತೆ ಸೋನು ಸೂದ್​ ಅವರ ಲೋಕೋಪಕಾರಿ ಕಾರ್ಯಗಳನ್ನ ಮೆಚ್ಚಿ ಅವರಿಗಾಗಿ ದೇವಾಲಯವನ್ನ ಸಮರ್ಪಿಸಿದ್ದಾರೆ. ಸ್ಥಳೀಯರೊಬ್ಬರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, ಸೋನು ಸೂದ್​ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರಿಗಾಗಿ ನಾವು ದೇವಾಲಯ ನಿರ್ಮಾಣ ಮಾಡಿರುವುದು ನಮಗೆ ಖುಷಿ ತಂದಿದೆ ಅಂತ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top