ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಿಎಂ ನರೇಂದ್ರ ಮೋದಿಗೆ ಅತ್ಯುನ್ನತ ಪುರಸ್ಕಾರ ಲೀಜನ್ ಆಫ್ ಮೆರಿಟ್ ಪದಕ ನೀಡಿ ಗೌರವಿಸಿದ್ದಾರೆ. ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್ಜೀತ್ ಸಿಂಗ್ ಪ್ರಧಾನಿ ಮೋದಿಯ ಪರವಾಗಿ, ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಸಿ ಓಬ್ರಯಾನ್ರಿಂದ ಈ ಪದಕವನ್ನು ಸ್ವೀಕರಿಸಿದ್ದಾರೆ.
“President @realDonaldTrump presented the Legion of Merit to Indian Prime Minister Narendra Modi for his leadership in elevating the U.S.-India strategic partnership. Ambassador @SandhuTaranjitS accepted the medal on behalf of Prime Minister Modi.” –NSA Robert C. O’Brien pic.twitter.com/QhOjTROdCC
— NSC (@WHNSC) December 21, 2020
ಅಮೆರಿಕದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರವಾಗಿರುವ ‘ಲೀಜನ್ ಆಫ್ ಮೆರಿಟ್’ ಅತ್ಯುತ್ತಮ ಸೇವೆ ಮತ್ತು ಕಾರ್ಯಕ್ಷಮತೆಯಲ್ಲಿ ಪ್ರಶಂಸನೀಯ ನಡುವಳಿಕೆ ತೋರಿದವರಿಗೆ ನೀಡಿ ಗೌರವಿಸಲಾಗುತ್ತದೆ. ರಾಜ್ಯದ ಮುಖ್ಯಸ್ಥರೊಬ್ಬರಿಗೆ ಅಥವಾ ಸರ್ಕಾರವೊಂದಕ್ಕೆ ನೀಡಲಾಗುವ ‘ಹೈಯೆಸ್ಟ್ ಡಿಗ್ರಿ ಚೀಫ್ ಕಮಾಂಡರ್ ಲೀಜನ್ ಆಫ್ ಮೆರಿಟ್’ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಿರುವುದು ವಿಶೇಷ.
ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ನ ಮಾಜಿ ಪ್ರಧಾನಿ ಶಿನ್ಸೋ ಅಬೆ ಅವರಿಗೂ ಕೂಡ ಟ್ರಂಪ್ ಈ ಗೌರವ ನೀಡಿದ್ದು, ಆಯಾ ರಾಷ್ಟ್ರಗಳ ರಾಯಭಾರಿಗಳು ವಾಷಿಂಗ್ಟನ್ ಡಿಸಿಯಲ್ಲಿ ಪದಕವನ್ನ ಸ್ವೀಕರಿಸಿದರು ಎಂದು ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಟ್ವಿಟರ್ನಲ್ಲಿ ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
