fbpx
ಸಮಾಚಾರ

ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅರೆಸ್ಟ್

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ನಡೆಯುತ್ತಿದ್ದ ಕ್ಲಬ್ ಮೇಲೆ ದಾಳಿ ನಡೆಸಿರುವ ಮುಂಬೈ ಪೊಲೀಸರು ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಸುಸೇನ್ ಖಾನ್ ಮತ್ತು ಗಾಯಕ ಗುರು ರಾಂಧವ ಸೇರಿದಂತೆ ಸುಮಾರು 34 ಮಂದಿಯನ್ನು ಬಂಧಿಸಿ, ಜಾಮೀನನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಮುಂಬೈ ವಿಮಾನ ನಿಲ್ದಾಣದ ಸಮೀಪದ ಡ್ರಾಗನ್ ಫ್ಲೈ ಕ್ಷಬ್​ ಮೇಲೆ ಮಂಗಳವಾರ ನಸುಕಿನ 2.30ರ ವೇಳೆ ಈ ದಾಳಿ ನಡೆದಿದೆ. ಕ್ಲಬ್‌ನಲ್ಲಿನ ಏಳು ಸಿಬ್ಬಂದಿ ಸೇರಿದಂತೆ ಅಲ್ಲಿದ್ದವರನ್ನು ಬಂಧಿಸಲಾಗಿದೆ. ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗುರು ರಾಂಧವ ಸೇರಿದಂತೆ ಅನೇಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ದಾಳಿ ನಡೆದಿದೆ.

ಭಾರತದ ಪ್ರಮುಖ ಆಲ್ ರೌಂಡರ್ ಆಗಿದ್ದ ರೈನಾ ಕಳೆದ ಆಗಸ್ಟ್ 15ರಂದು ಎಂಎಸ್ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾಗ ತಾನೂ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಐಪಿಎಲ್‌ನಲ್ಲಿ ರೈನಾ ಆಡುವುದನ್ನು ನಿರೀಕ್ಷಿಸಲಾಗಿತ್ತಾದರೂ ವೈಯಕ್ತಿಕ ಕಾರಣದಿಂದ ರೈನಾ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top