fbpx
ಸಮಾಚಾರ

ಅನ್ನದಾತರಿಗೆ ರೈತ ದಿನಾಚರಣೆ ಶುಭಕೋರಿದ ದರ್ಶನ್

ಇಂದು (ಡಿಸೆಂಬರ್ 23) ವಿಶ್ವ ರೈತ ದಿನಾಚರಣೆ. ವಿಶ್ವದಾದ್ಯಂತ ಅನೇಕರು ಅನ್ನದಾತರನ್ನು ನೆನೆದು ಶುಭಾಶಯ ಕೋರುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕೂಡ ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಮೂರು ಹೊತ್ತು ಹೊಟ್ಟೆ ತುಂಬಿಸುವ ಅನ್ನದಾತರಿಗೆ ಇಂದು ಶುಭಾಶಯ ಕೋರುತ್ತಿದ್ದಾರೆ. ಈ ಮದ್ಯೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಕೂಡ ರೈತರನ್ನು ಸ್ಮರಿಸಿದ್ದಾರೆ.

ಟ್ವೀಟ್​​ ಮಾಡಿ ಅನ್ನದಾತರಿಗೆ ಧನ್ಯವಾದ ತಿಳಿಸಿರುವ ದರ್ಶನ್​, ರೈತರು ನಿಜವಾದ ವೀರರಾಗಿದ್ದಾರೆ. ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ, ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ ಅಂತ ಹೇಳಿದ್ದಾರೆ. ರೈತರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಎಂದು ದರ್ಶನ್ ಬರೆದುಕೊಂಡಿದ್ದಾರೆ.

 

 

ಅಂದಹಾಗೆ ದೇಶದ 5ನೇ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್‌ ಸಿ೦ಗ್‌ ಅವರ ಜನ್ಮದಿನವಾದ ಡಿಸೆ೦ಬರ್‌ 23 ರ೦ದು ಪ್ರತಿವರ್ಷ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಚರಣ್‌ ಸಿ೦ಗ್‌ ರವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಹತ್ತಾರು ನೀತಿಗಳನ್ನು ಜಾರಿಗೆ ತ೦ದಿದ್ದಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಅವರು ಸ್ವತಹಃ ರೈತ ಕುಟು೦ಬಕ್ಕೆ ಸೇರಿದವರಾಗಿದ್ದರಿ೦ದ ರೈತರ ಕಷ್ಟಗಳನ್ನು ಅರಿತವರಾಗಿದ್ದರು. ಸ್ವಾತ೦ತ್ರ್ಯ ಪೂರ್ವದಿ೦ದ ಸ್ವಾತ೦ತ್ಯ ನ೦ತರದವರೆಗೂ ಕೃಷಿಗೆ ಅವರ ಕೊಡುಗೆ ಅಪಾರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top