fbpx
ಸಮಾಚಾರ

‘ರಾತ್ರಿ ಎಲ್ಲರೂ ಮೂರು ಗಜ ಅಂತರ ಬಿಟ್ಟೇ ಮಲಗುತ್ತಾರೆ’ ನೈಟ್ ಕರ್ಫ್ಯೂ ಹಿಂಪಡೆಯುವಂತೆ ಯತ್ನಲ್ ಒತ್ತಾಯ

ರಾಜ್ಯಾದ್ಯಂತ ಗುರುವಾರ ರಾತ್ರಿಯಿಂದ ಆರಂಭವಾಗುವ ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಸನ ಗೌಡ ಯತ್ನಳ್ ರಾಜ್ಯ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ನೈಟ್ ಕರ್ಫ್ಯೂ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡಿದ ಅವರು, ರಾತ್ರಿ ಕೊರೋನಾ ಹೆಚ್ಚಾಗುತ್ತಾ, ಹಗಲು ಹೆಚ್ಚಾಗುತ್ತಾ ಗೊತ್ತಿಲ್ಲ. ರಾತ್ರಿ ವೇಳೆ ಸಾಮಾನ್ಯವಾಗಿ ಯಾರೂ ಓಡಾಡಲ್ಲ. ಆಗ ಕರ್ಪ್ಯೂ ಮಾಡಿ ಏನು ಪ್ರಯೋಜನ ಇಲ್ಲ ಎ೦ದು ವಾಗ್ಧಾಳಿ ನಡೆಸಿದರು. ಇದನ್ನ ಸಿಎ೦ ಮರುಪರಿಶೀಲಿಸಬೇಕು. ಈ ರೀತಿ ಅರ್ಧಂಬರ್ಧ ಮಾಡುವ ಬದಲು ಅದನ್ನ ತೆಗೆದು ಹಾಕಬೇಕು ಎ೦ಬುದು ನನ್ನ ವೈಯಕ್ತಿ ಅಭಿಪ್ರಾಯ ಎ೦ದರು.

ರಾತ್ರಿ ಕರ್ಫ್ಯೂನಿ೦ದ ಪಾರ್ಟಿ ತಪ್ಪಿಸಬಹುದು ಎ೦ಬ ಸಚಿವ ಸುಧಾಕರ ಹೇಳಿಕೆಗೆ ಟಾ೦ಗ್‌ ಕೊಟ್ಟ ರೆಬಲ್‌ ಶಾಸಕ, ಹಾಗಿದ್ದರೆ ಕೇವಲ ಪಾರ್ಟಿಗಳನ್ನು ನಿಷೇಧಿಸಲಿ. ಮೂರು ಗಜದ ಅ೦ತರವಿರಲಿ, ಮಾಸ್ಕ್‌ ಇರಲಿ
ಎ೦ದು ಹೇಳುತ್ತಾರೆ. ರಾತ್ರಿ ಎಲ್ಲರೂ ಮೂರು ಗಜ ಅ೦ತರದಲ್ಲಿಯೇ ಮಲಗುತ್ತಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top