fbpx
ಸಮಾಚಾರ

ಬಾಲಿವುಡ್ ಪ್ರವೇಶಿಸಿದ ರಶ್ಮಿಕಾ ಮಂದಣ್ಣ: ಮೊದಲ ಸಿನಿಮಾದಲ್ಲೇ ಸ್ಟಾರ್ ನಟನ ಜೊತೆ ರೋಮ್ಯಾನ್ಸ್

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು ರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು. ಕನ್ನಡವೂ ಸೇರಿದಂತೆ ಕಾಲಿವುಡ್ಡು, ಟಾಲಿವುಡ್ಡುಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈ ಮದ್ಯೆ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ರಿಯಲ್ ಲೈಫ್ ಗೂಢಚಾರಿಕೆ ಕಥಾವಸ್ತು ಇರುವ “ಮಿಷನ್ ಮಜ್ನು” ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಆ್ಯಡ್ ಫಿಲಂ ಮೇಕರ್ ಶಾಂತನು ಬಾಗಚಿ ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪರ್ವೀಜ್ ಶೇಖ್, ಅಸೀಮ್ ಅರೋರಾ, ಸುಮೀತ್ ಭತೇಜಾ ಅವರು ಚಿತ್ರಕತೆ ರಚಿಸಿದ್ದಾರೆ. ರೋನೀ ಸ್ಕ್ರೂವಾಲಾ ಅವರ ಆರ್​ಎಸ್​ವಿಪಿ ಮ ತ್ತು ಗ್ಯುಲ್ಟಿ ಬೈ ಅಸೋಸಿಯೇಶನ್ ಜಂಟಿಯಾಗಿ ನಿರ್ಮಿಸುತ್ತಿರುವ ಮಿಷನ್ ಮಜ್ನು ಫೆಬ್ರವರಿ ತಿಂಗಳಲ್ಲಿ ಸೆಟ್ಟೇರಲಿದೆ.

‘ಮಿಷನ್‌ ಮಜ್ನು’ ಚಿತ್ರದ ಪೋಸ್ಟರ್‌ ಶೇರ್‌ ಮಾಡಿಕೊಳ್ಳುವ ಮೂಲಕ ಖುಷಿಯ ವಿಷಯ ತಿಳಿಸಿದ್ದಾರೆ. ‘ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ಇಲ್ಲಿಂದ ಹೊಸ ಜರ್ನಿ ಶುರುವಾಗಲಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ಬಾಲಿವುಡ್‌ ಚಿತ್ರದ ಕುರಿತು ಟ್ವೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top