fbpx
ಸಮಾಚಾರ

“ಕೊಹ್ಲಿಗೆ ಒಂದು ನ್ಯಾಯ, ನಟರಾಜನ್​ಗೆ ಇನ್ನೊಂದು ಅನ್ಯಾಯ” ಬಿಸಿಸಿಐ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ.

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿನ ಅಸಮಾನತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ತಂಡದಲ್ಲಿ ಭಿನ್ನ ವ್ಯಕ್ತಿಗಳಿಗೆ ಭಿನ್ನವಾದ ನಿಯಮಗಳು ಇದೆ ಎಂದು ಗವಾಸ್ಕರ್ ನೇರವಾಗಿಯೇ ತಮ್ಮ ಅಂಕಣದಲ್ಲಿ ಕಿಡಿಕಾರಿದ್ದಾರೆ. ಇಬ್ಬರು ಆಟಗಾರರ ವಿಭಿನ್ನವಾದ ವಿಚಾರಗಳನ್ನು ಬೊಟ್ಟು ಮಾಡಿ ಸುನಿಲ್ ಗವಾಸ್ಕರ್ ತಂಡದೊಳಗಿನ ಅಸಮಾನತೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಪಿತೃತ್ವ ರಜೆಯೆ ಮೆರೆಗೆ ಆಸೀಸ್ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಲು ವಿರಾಟ್ ಕೊಹ್ಲಿಗೆ ಅವಕಾಶ ಮಾಡಿಕೊಟ್ಟಿರುವ ಬಿಸಿಸಿಐ ನೀತಿಯನ್ನು ಗವಾಸ್ಕರ್ ಪ್ರಶ್ನಿಸಿದರು. ಅತ್ತ ತಮ್ಮ ಚೊಚ್ಚಲ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಎಡಗೈ ವೇಗಿ ತಂಗರಸು ನಟರಾಜನ್ ಅವರನ್ನು ಕಡೆಗಣಿಸಿರುವುದು ಗವಾಸ್ಕರ್ ಅಸಮಾಧಾನಕ್ಕೆ ಕಾರಣವಾಯಿತು. ಇನ್ನೊಬ್ಬ ಆಟಗಾರ ನಿಮಯಗಳ ಬಗ್ಗೆ ಆಶ್ಚರ್ಯಪಟ್ಟುಕೊಳ್ಳುತ್ತಾನೆ. ಆದರೆ ಹೊಸಬರಗಾಗಿ ಅದರ ಬಗ್ಗೆ ಶಬ್ದ ಎತ್ತುವ ಹಾಗಿಲ್ಲ. ಅವರೇ ಟೀ. ನಟರಾಜನ್. ಟಿ20 ಸರಣಿಯಲ್ಲಿ ಈ ಬೌಲರ್ ಪ್ರಭಾವಶಾಲಿ ಡೆಬ್ಯು ಮಾಡಿದ್ದರು ಎಂದು ಹೇಳಿದರು.

ಐಪಿಎಲ್ ಪ್ಲೇ-ಆಫ್ ನಡೆಯುತ್ತಿರುವಾಗಲೇ ಅವರು ಮೊದಲ ಬಾರಿಗೆ ಅಪ್ಪನಾಗಿದ್ದರು. ಆದರೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮುಂದುವರಿಯಲು ಕೇಳಲಾಯಿತು. ಅದು ಕೂಡಾ ತಂಡದ ಭಾಗವಾಗದೇ ನೆಟ್ ಬೌಲರ್ ಆಗಿ ಉಳಿಯಬೇಕಾಯಿತು. ಅದನ್ನುಊಹಿಸಿ ನೋಡಿ. ಓರ್ವ ಮ್ಯಾಚ್ ವಿನ್ನರ್ ಬೌಲರ್‌ಗೆ ನೆಟ್ ಬೌಲರ್ ಆಗಿ ಉಳಿದುಕೊಳ್ಳಲು ಹೇಳಲಾಗುತ್ತಿದೆ. ಅಂದರೆ ಅವರು ಜನವರಿ ಮೂರನೇ ವಾರದಲ್ಲಷ್ಟೇ ಸರಣಿ ಮುಗಿದ ಬಳಿಕ ಮನೆಗೆ ಮರಳಿ ಮೊದಲ ಬಾರಿಗೆ ಮಗಳನ್ನು ನೋಡಲಿದ್ದಾರೆ. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ತನ್ನ ಮಗುವಿನ ಜನನದ ನಿಮಿತ್ತ ಮೊದಲ ಟೆಸ್ಟ್ ಬಳಿಕ ತವರಿಗೆ ಹಿಂತಿರುಗಿದ್ದಾರೆ ಎಂದು ಗವಾಸ್ಕರ್ ಟೀಮ್ ಇಂಡಿಯಾದ ಇಬ್ಬಗೆಯ ನೀತಿ ಖಂಡಿಸುತ್ತಾ ಹೇಳಿದರು.

ಈ ಬಗ್ಗೆ ಟಿ ನಟರಾಜನ್ ಯಾವುದೇ ರೀತಿಯಲ್ಲೂ ಧ್ವನಿಯೆತ್ತಲಾರ ಎಂಬುದು ಗೊತ್ತಿದೆ. ಏಕೆಂದರೆ ತಂಡಕ್ಕೆ ಆತ ಹೊಸಬ. ಹೀಗಾಗಿ ಅನ್ಯಾಯ ನಡೆದರೂ ಆತ ಸುಮ್ಮನಿರಲಿದ್ದಾನೆ. ಇಲ್ಲಿ ಕೊಹ್ಲಿಗೆ ಮಗುವಿನ ಹೆಸರಿನಲ್ಲಿ ರಜೆ ನೀಡುವ ಬಿಸಿಸಿಐ, ಅದೇ ನಟರಾಜನ್​ಗೆ ಅನ್ಯಾಯ ಮಾಡಿದೆ ಎಂದು ಗವಾಸ್ಕರ್ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top