fbpx
ಸಮಾಚಾರ

ಶೂಟಿಂಗ್ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಖ್ಯಾತ ನಟ!

‘ಅಯ್ಯಪ್ಪನುಮ್ ಕೋಶಿಯಮ್’, ‘ಕಮ್ಮಟಿಪಾಡಂ’, ‘ಪಾವಡ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದ ಮಲಯಾಳಂ ನಟ ಅನಿಲ್ ನೆಡುಮಂಗದ್ ಅವರು ನಿಧನರಾಗಿದ್ದಾರೆ.

ಮಲನ್‌ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ ‘ಪೀಸ್‌’ ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್‌ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿದ್ದಾರೆ.

ಮಲಯಾಳಂ ಟೆಲಿವಿಷನ್ ಚಾನೆಲ್‌ಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ನಜನ್ ಸ್ಟೀವ್ ಲೋಪೆಜ್, ಪಾವಡಾ, ಕಮ್ಮಟ್ಟಿ ಪದಮ್, ಕಿಸ್ಮತ್, ಪೊರಿಂಜು ಮರಿಯಮ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ.

ಆರು ತಿಂಗಳ ಹಿಂದೆ ನಿಧನರಾದ ಅಯ್ಯಪನ್ನುಂ ಕೋಶಿಯುಂ ನಿರ್ದೇಶಕ ಕೆ.ಆರ್. ಸಚಿದಾನಂದನ್ (ಸಚಿ) ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ಅನಿಲ್, ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೃದಯ ಸ್ಪರ್ಶಿಯಾಗಿ ಬರೆದಿದ್ದರು. ಎರಡು ದಿನಗಳ ಹಿಂದೆಯಷ್ಟೇ 37 ವರ್ಷದ ಮಲಯಾಳಂ ಚಿತ್ರ ನಿರ್ದೇಶಕ ಶಹನವಾಸ್ ನಾರಾನಿಪುಜ ಹೃದಯಾಘಾತದಿಂದ ಮೃತಪಟ್ಟಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top