fbpx
ಸಮಾಚಾರ

ತಮ್ಮನ್ನು ನೆನೆಸಿಕೊಂಡ ಟ್ವೀಟ್ ಮಾಡಿದ ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಆಗಿ ಮೂರು ವರ್ಷಗಳಾಯ್ತು. ಪರಸ್ಪರ ಅವರಿಬ್ಬರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ‘ಕಿರಿಕ್ ಪಾರ್ಟಿ’ ತಂಡವನ್ನು ನೆನಪಿಸಿಕೊಂಡಿದ್ದರು. ಅದಕ್ಕೆ ಉತ್ತರವೆಂಬಂತೆ ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

 

 

ಟ್ವೀಟ್ ಮಾಡಿದ ರಕ್ಷಿತ್‌ & ರಶ್ಮಿಕಾ
‘ಬೆಳಗೆದ್ದು ಸಾಂಗ್‌ಗೆ ನೀವು ತೋರಿಸಿದ ಪ್ರೀತಿ ಮತ್ತು ಹಾರೈಕೆಯಿಂದ ಇದು ಯೂ ಟ್ಯೂಬ್‌ನಲ್ಲಿ 100 ಮಿಲಿಯನ್ ವೀವ್ಸ್ ಪಡೆಯಲು ಸಾಧ್ಯವಾಗಿದೆ. ಇಂತಹ ಒಂದು ಅದ್ಭುತ ಸೃಷ್ಟಿಯಾಗಲು ಕಾರಣರಾದ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರನ್ನು ಅಭಿನಂದಿಸಬೇಕು’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಹಾಗೆಯೇ, ರಶ್ಮಿಕಾ ಕೂಡ, ‘ಬೆಳಗೆದ್ದು.. ನನ್ನ ಮೊದಲ ಸಾಂಗ್‌… ಇದೀಗ ಇದು ನಿಮ್ಮೆಲ್ಲರ ಪ್ರೀತಿಯಿಂದ ನೂರು ಮಿಲಿಯನ್ ತಲುಪಿದೆ. ಈ ಹಾಡಿನ ಚಿತ್ರೀಕರಣ ಮಾಡಿದ್ದು ನನಗಿನ್ನೂ ನೆನಪಿದೆ’ ಬರೆದುಕೊಂಡಿದ್ದಾರೆ. ರಕ್ಷಿತ್​ ಸೇರಿದಂತೆ ಇತರೆ ಸಹಕಲಾವಿದರು ಹಾಗೂ ನಿರ್ದೇಶಕರನ್ನು ಟ್ಯಾಗ್​ ಮಾಡಿದ್ದರು.

ಇದಕ್ಕೆ ಕೊಂಚ ತಡವಾಗಿಯಾದರೂ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಹೌದು, ಬೆಳೆಯುತ್ತಲೇ ಹೋಗು ಹುಡುಗಿ, ನಿನ್ನ ಕನಸುಗಳೆಲ್ಲ ನನಸಾಗಲಿ ಎಂದು ಮನಸಾರೆ ಹಾರೈಸಿದ್ದಾರೆ ಶೆಟ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top