fbpx
ಸಮಾಚಾರ

ವಿಷ್ಣು ಮೇಲೆ ಮತ್ತೊಮ್ಮೆ ಅಪಮಾನ: ಕಿಡಿಗೇಡಿಗಳಿಂದ ರಾತ್ರೋ ರಾತ್ರಿ ವಿಷ್ಣುದಾದ ಪ್ರತಿಮೆ ದ್ವಂಸ

ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಈ ಹಿಂದೆಯೂ ಇದೇ ಸ್ಥಳದಲ್ಲಿ ಪ್ರತಿಮೆ ಧ್ವಂಸವಾಗಿತ್ತು. ಈ ಹಿಂದೆ ಪ್ರತಿಮೆಯನ್ನು ಇಲ್ಲಿಂದ ಕೆಲ ಕಿಡಿಗೇಡಿಗಳು ಎತ್ತೊಯ್ದಿದ್ದರು. ನಂತರ ಮತ್ತೆ ಪ್ರತಿಮೆಯನ್ನು ಇಡಲಾಗಿತ್ತು. ಈಗ ರಾತ್ರೋರಾತ್ರಿ ಪ್ರತಿಮೆ ಧ್ವಂಸಗೊಳಿಸುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಭಿಮಾನಿಗಳು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಜೊತೆಗೆ ಇದೇ ಸ್ಥಳದಲ್ಲಿ ಮತ್ತೆ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಸ್ಥಳದಲ್ಲಿ ಸಾಕಷ್ಟು ಅಭಿಮಾನಿಗಳು ಜಮಾವಣೆಯಾಗುತ್ತಿದ್ದು, ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳದಲ್ಲಿ ಜನಸಂದಣಿ ಹೆಚ್ಚಾದ ಹಿನ್ನೆಲೆ, ಪೊಲೀಸ್​ ಬಂದೋಬಸ್ತ್​ ಸಹ ಹೆಚ್ಚಿಸಲಾಗಿದೆ. ಸ್ಥಳದಕ್ಕೆ ವಿಜಯನಗರ ಎಸಿಪಿ ನಂಜುಂಡೇಗೌಡ ಭೇಟಿ ಕೊಟ್ಟಿದ್ದು, ಮೂವರು ಇನ್ಸ್‌ಪೆಕ್ಟರ್​ಗಳು ಹಾಗೂ ಎಸ್ಐಗಳು ಸೇರಿ ಇಪ್ಪತ್ತಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top