fbpx
ಸಮಾಚಾರ

“ನನ್ನ ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜಿಸಬೇಡಿ” ನಟಿ ಕಂಗನಾ ರಣಾವತ್‌ ಹೀಗೆ ಹೇಳಿದ್ದೇಕೆ?

ಪ್ರತಿದಿನ ಏನಾದರೂ ಒಂದು ವಿಚಾರಗಳನ್ನು ಶೇರ್​ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಬಾಲಿವುಡ್​ ಕ್ವೀನ್ ಕಂಗನಾ ರಣಾವತ್​ ಈಗ ಮತ್ತೊಂದು ಹೇಳಿಕೆ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಟೈಮ್‌ಲೈನ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅವರ ಸ್ವರಚಿತ ಕವಿತೆಯನ್ನೂ ಶೇರ್ ಮಾಡಿದ್ದಾರೆ.

ತಮ್ಮ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಬೇಡಿ, ಬದಲಾಗಿ ಅದನ್ನು ಪರ್ವತಗಳಲ್ಲಿ ಹರಡಿ ಎಂದು ಅತ್ಯಂತ ಭಾವನಾತ್ಮಕವಾಗಿ ಹೇಳಿಕೊಂಡಿರುವ ಹೊಸ ಕವಿತೆಯೊಂದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

 

 

ಈ ವಿಡಿಯೋದಲ್ಲಿ ಅವರು ತಮ್ಮ ಸಂಬಂಧಿಗಳ ಜೊತೆಗೆ ದಟ್ಟ ಮಂಜಿನ ಹಾಸಿನಲ್ಲಿ ಹೈಕಿಂಗ್‌ ಮಾಡುವ ದೃಶ್ಯವಿದೆ. ಅದರ ಜೊತೆಗೆ ‘ರಾಖ್‌’ ಅಂದರೆ ಭಸ್ಮ ಎಂಬ ಅರ್ಥ ಬರುವ ಟೈಟಲ್‌ನ ಈ
ಕವಿತೆ ಬರುತ್ತದೆ. ಇದರಲ್ಲಿ ವ್ಯಕ್ತಿಯ ಸಾವಿನ ನಂತರ ಅವರ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸುವ ಆಚರಣೆಯ ಬಗ್ಗೆ ಹೇಳಿಕೊಂಡಿದ್ದಾರೆ. ‘ನನ್ನ ಚಿತಾಭಸ್ಮ ಈ ಸುಂದರ ಪರ್ವತಗಳಲ್ಲಿ ಸಿಂಪಡಿಸಿ ಹೋಗಲಿ ಎಂದು ಬಯಸುತ್ತೇನೆ’ ಎಂದಿದ್ದಾರೆ ಕಂಗನಾ.

‘ನನ್ನ ಚಿತಾಭಸ್ಮವನ್ನು ಗಂಗೆಯಲ್ಲಿ ತೇಲಿಸಬೇಡಿ. ಪ್ರತಿ ನದಿಯೂ ಸಾಗರಕ್ಕೆ ಹೋಗಿ ಸೇರುತ್ತದೆ. ಸಾಗರದ ಆಳಕ್ಕೆ ನಾನು ಹೆದರುತ್ತೇನೆ. ನಾನು ಆಕಾಶವನ್ನು ಸ್ಪರ್ಶಿಸಲು ಬಯಸುತ್ತೇನೆ. ನನ್ನ ಚಿತಾಭಸ್ಮವನ್ನು ಈ ಪರ್ವತಗಳಲ್ಲಿ ಚದುರಿಸಿಬಿಡಿ. ಆಗ ಸೂರ್ಯ ಮೂಡುವಾಗ ನಾನದನ್ನು ಸ್ಪರ್ಶಿಸಬಹುದು. ಏಕಾಂಗಿಯಾದಾಗ ಚಂದಿರನೊಡನೆ ಮಾತನಾಡಬಹುದು, ನನ್ನ ಭಸ್ಮವನ್ನು ಆ ಕ್ಷಿತಿಜದಲ್ಲಿ ಬಿಟ್ಟು ಬಿಡಿ’ ಎಂದು ಹಾಡಿದ್ದಾರೆ ಕಂಗನಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top