fbpx
ಸಮಾಚಾರ

ಜೈನಕಾಶಿ ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ವಿಶ್ವ ಪರಂಪರೆಯ ಪವಿತ್ರ ತಾಣಗಳಲ್ಲಿ ಒಂದಾದ ಜೈನ ಕಾಶಿ ಎಂದೇ ಖ್ಯಾತಿಯಾಗಿರುವ ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ ಲಕ್ಷದೀಪೋತ್ಸವ ಬಹಳ ವಿಜೃಂಭಣೆಯಿಂದ ನಡೆದಿದೆ. ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ಲಕ್ಷ ದೀಪೋತ್ಸವ ಜರಗಿತು.

ದೀಪೋತ್ಸವದ ವೇಳೆ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. “ನಾವೆಲ್ಲರೂ ಸತ್ಯ ಮತ್ತು ಜ್ಞಾನದ ಮೂಲಕ ಸಮ್ಯಕ್ ಜ್ಞಾನಪ್ರಾಪ್ತಿ ಮಾಡಿಕೊಂಡು ಭಗವಂತನನ್ನು ನಮ್ಮೊಳೊಗೆ ಕಂಡುಕೊಳ್ಳಬಹುದಾಗಿದೆ. ಲಕ್ಷದೀಪೋತ್ಸವ ಇದಕ್ಕೊಂದು ಉತ್ತಮ ರೂಪವಾಗಿದೆ” ಎಂದು ಹೇಳಿದರು.

 

 

ಕಾರ್ಯಕ್ರಮದಲ್ಲಿ ಸುವರ್ಣನುಡಿ ವೆಂಚರ್ಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಭವ್ಯಾ, ಶ್ರೀ ಸಂದೀಪ್ ಅವರು ಕೂಡ ಉಪಸ್ಥಿತರಿದ್ದು ಅರ್ಥಪೂರ್ಣವಾಗಿ ಜರುಗಿದ ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೆ ವೇಳೆ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಭವ್ಯ ಮತ್ತು ಸಂದೀಪ್ ಅವರಿಗೆ ಆಶೀರ್ವಾದ ಮಾಡಿ ಹರಸಿದರು.

ಸ್ವಾಮೀಜಿಗಳ ಆಶೀರ್ವಚನದ ನಂತರ ಲಕ್ಷದೀಪೋತ್ಸವ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಿತು. ಉತ್ಸವ,ಧಾರ್ಮಿಕ ಸಭೆ ಮತ್ತು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳು, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಿಂದ ಅಲ್ಲದೆ ಹೊರ ದೇಶಗಳಿಂದಲೂ ಆಗಮಿಸಿದ್ದ ಶ್ರಾವಕ, ಶ್ರಾವಿಕೆಯರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top