fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ

ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಸೋಮವಾರ (ಡಿ.28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದ್ಯೋಗಿ ಅಕ್ಷಯ್‌ ಜೊತೆ ಅವರ ಮದುವೆ ನೆರವೇರಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಶುಭ ಸಮಾರಂಭ ನಡೆದಿದೆ.

ಕೋವಿಡ್-19 ನಿಯಮಾನುಸಾರ ನಡೆಯಲಿದೆ.ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು , ಅಂದು ಚಿತ್ರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿತ್ತು. ಚಿತ್ರರಂಗದವರಿಗಾಗಿ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲು ರಮೇಶ್‌ ಅರವಿಂದ್‌ ನಿರ್ಧರಿಸಿದ್ದಾರೆ.

ನಿಹಾರಿಕಾ ಮತ್ತು ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಡಿ.27ರ ರಾತ್ರಿ ಸಂಗೀತ್ ಕಾರ್ಯಕ್ರಮ ನಡೆದಿದ್ದು ಅದರಲ್ಲಿ ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಕೆಲವರು ಭಾಗವಹಿಸಿದ್ದರು.

ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಕರ್ನಾಟಕದ ಜನತೆ, ಚಿತ್ರರಸಿಕರು ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ನಿಮ್ಮ ಪ್ರೀತಿಯ ಆಶೀರ್ವಾದ ಮಧುಮಕ್ಕಳ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top