fbpx
ಸಮಾಚಾರ

“ಸಿಕ್ಕಿಹಾಕಿಕೊಂಡ ದಿನ ದೇಶ ಬಿಟ್ಟು ಹೋಗಿ” ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ

ಡಾ. ವಿಷ್ಣುವರ್ಧನ್‌ ಅವರ ಪ್ರತಿಮೆಯನ್ನು ಶುಕ್ರವಾರ (ಡಿ.25) ಮಧ್ಯರಾತ್ರಿ ಧ್ವಂಸಗೊಳಿಸಲಾಗಿದ್ದು, ಇದಕ್ಕೆ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಅವರು‌ ಕೂಡ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ತಮ್ಮ ಅಭಿಪ್ರಾಯವನ್ನು ಅವರು ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

 

 

ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಸಂದೇಶ ನಿಡಿರುವ ಸುದೀಪ್ “ಪುತ್ಥಳಿ ಧ್ವಂಸ ಮಾಡಿದ ಮಹಾನುಭಾವರಿಗೆ ನಾನು ಹೇಳುವುದಿಷ್ಟೆ, ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ, ಏಕೆಂದರೆ ಅಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ ಅವರಿಗೆ ನೀವೇ ಪುತ್ಥಳಿ ಧ್ವಂಸ ಮಾಡಿದ್ದೆಂದು ತಿಳಿದರೆ ನಿಮ್ಮನ್ನು ಇದಕ್ಕಿಂತ ಹೆಚ್ಚಿನ ಕೆಟ್ಟ ರೀತಿಯಲ್ಲಿ ಹೊಡೆಯುತ್ತಾರೆ.” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಡೆದು ಹಾಕಿದ ಮಹಾನುಭಾವರಿಗೆ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಒಂದು ಸಲಹೆ ಕೊಡುತ್ತೇನೆ. ದಯವಿಟ್ಟು ನೀವು ಸಿಕ್ಕಿಹಾಕಿಕೊಳ್ಳಬೇಡಿ. ಒಡೆದು ಹಾಕಿದವರು ಯಾರು ಅಂತ ಗೊತ್ತಾದರೆ ನಿಮ್ಮನ್ನು ಅದಕ್ಕಿಂತ ಹೀನಾಯವಾಗಿ ಹೊಡೆದುಹಾಕುತ್ತಾರೆ. ನೀವು ಯಾರು ಅಂತ ಗೊತ್ತಾದ ದಿನ ದೇಶಬಿಟ್ಟು ಹೋಗಿ. ನಿಮ್ಮ ಉದ್ದೇಶ ಅರ್ಥ ಆಗಲ್ಲ, ಅರ್ಥ ಆಗೋಕೆ ಸಾಧ್ಯ ಇಲ್ಲ. ಎಲ್ಲಿ ಕೂತಿದಿರೋ ಗೊತ್ತಿಲ್ಲ, ಸಿಕ್ಕಿಹಾಕಿಕೊಳ್ಳಬೇಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

‘ನಿಮ್ಮ ಹೆಸರು ಹೊರಬಂದ ದಿನ ಏನು ನಡೆಯತ್ತೇ ಅದನ್ನು ಯಾರಿಂದಲೂ ತಡೆಯೋಕೆ ಆಗಲ್ಲ. ಮೂರ್ತಿ ಒಡೆಯುವ ಮುನ್ನ ವ್ಯಕ್ತಿಯಾಗಿ ಯೋಚನೆ ಮಾಡಿದ್ದರೆ ಅದು ಮನುಷ್ಯ ಆಗಿ ಮನುಷ್ಯ, ವ್ಯಕ್ತಿಯಾಗಿ ಮಾಡುವ ಕೆಲಸ ಅದಲ್ಲ, ಎಂತವರು ಆ ಕೆಲಸ ಮಾಡ್ತಾರೆ ಅನ್ನೋದನ್ನು ಹೇಳಿದರೆ ಸೆನ್ಸಾರ್ ಆಗತ್ತೆ, ಆ ಮೂರ್ತಿ ಬಿಡಿ, ಅದರ ಅಪ್ಪನ ರೀತಿ ಇರೋ ಮೂರ್ತಿ ಕಟ್ಟುತ್ತೇವೆ,ಅದು ಬೇರೆ ವಿಷಯ’ ಎಂದು ನಟ ಕಿಚ್ಚ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top