fbpx
ಸಮಾಚಾರ

ಉಪಸಭಾಪತಿ ಧರ್ಮೇಂದ್ರಗೌಡ ರವರ ನಿಧನಕ್ಕೆ ಸಂತಾಪ ಸೂಚಿದ ಮಾಜಿ ಸಚಿವ ಜಿಟಿ ದೇವೇಗೌಡ.

ಜೆಡಿಎಸ್ ನಾಯಕ, ವಿಧಾನ ಪರಿಷತ್‌ನ ಉಪ ಸಭಾಪತಿ ಎಸ್ಎಲ್ ಧರ್ಮೇಗೌಡ ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಅವರ ಅಭಿಮಾನಿಗಳನ್ನು ದುಃಖದ ಕಡಲಿಗೆ ನೂಕಿದೆ. ಅಲ್ಲದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಅನೇಕ ರಾಜಕೀಯ ನಾಯಕರು ಮರಗುವಂತೆ ಮಾಡಿದೆ.

 

 

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಮಾಜಿ ಸಚಿವ ಜಿ. ಟಿ. ದೇವೇಗೌಡ ಅವರು ಧರ್ಮೇಗೌಡರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಲತಾಣಗಳಲ್ಲಿ ನೋವು ತೋಡಿಕೊಂಡಿರುವ ಜಿಟಿ ದೇವೇಗೌಡ ಅವರು ಧರ್ಮೇಗೌಡ ಸಾವಿಗೆ ಕಂಬನಿ ಮಿಡಿದಿದ್ದಾರೆ.

 

ನನ್ನ ಸ್ನೇಹಿತರು ಹಾಗೂ ಸಹಕಾರಿಗಳಾದ ವಿಧಾನ ಪರಿಷತ್ ನ ಉಪ ಸಭಾಪತಿಗಳು ಎಸ್. ಎಲ್. ಧರ್ಮೇಗೌಡ ಅವರ ಅಕಾಲಿಕ ಸಾವಿನ ಸುದ್ದಿ ನಿಜಕ್ಕೂ ಆಘಾತವನ್ನು…

Posted by GT Devegowda on Monday, 28 December 2020

 

“ನನ್ನ ಸ್ನೇಹಿತರು ಹಾಗೂ ಸಹಕಾರಿಗಳಾದ ವಿಧಾನ ಪರಿಷತ್ ನ ಉಪ ಸಭಾಪತಿಗಳು ಎಸ್. ಎಲ್. ಧರ್ಮೇಗೌಡ ಅವರ ಅಕಾಲಿಕ ಸಾವಿನ ಸುದ್ದಿ ನಿಜಕ್ಕೂ ಆಘಾತವನ್ನು ಉಂಟುಮಾಡಿದೆ.
ಅವರ ನಿಧನ ನನಗೆ ವೈಯುಕ್ತಿಕವಾಗಿ ತೀರಾ ಬೇಸರವನ್ನುಂಟು ಮಾಡಿದೆ. ಧರ್ಮೇಗೌಡರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.” ಎಂದು ಜಿಟಿ ದೇವೇಗೌಡ ಅವರು ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top