fbpx
ಸಮಾಚಾರ

15 ವರ್ಷದ ನಂತರ ‘ಮೈ ಆಟೋಗ್ರಾಫ್’ ಲತಿಕಾ ಮನೆಗೆ ಕಿಚ್ಚ ಸುದೀಪ್ ಭೇಟಿ!

ಕಿಚ್ಚ ಸುದೀಪ್ ಬರೋಬ್ಬರಿ 15 ವರ್ಷಗಳ ಹಿಂದೆ ಹೋಗಿದ್ದಾರೆ. ‘ಮೈ ಆಟೋಗ್ರಾಫ್‌’ ಸಿನಿಮಾ ಶೂಟಿಂಗ್‌ ನಡೆದ ಸ್ಥಳಕ್ಕೆ ಭೇಟಿ ನೀಡಿ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ. “ಮೈ ಆಟೋಗ್ರಾಫ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. “ಮೈ ಆಟೋಗ್ರಾಫ್” ಚಿತ್ರದಲ್ಲಿ ತಾವು ಅಭಿನಯಿಸಿದ್ದ ಸ್ಥಳಗಳನ್ನು ಸ್ಮರಿಸಿಕೊಂಡು ಮನೆಯ ಸುತ್ತಲೂ ತಿರುಗಾಡಿದ್ದಾರೆ.

ಈ ವಿಡಿಯೋವನ್ನು ಸುದೀಪ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಸುದೀಪ್ “ಸವಿ ಸವಿ ನೆನಪು” ಹಾಡಿನೊಂದಿಗೆ ಅಂದಿನ ಶೂಟಿಂಗ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

 

 

ಆಟೋಗ್ರಾಫ್ ನನ್ ಲಕ್ಕಿ ಚಾಮ್ ಸಿನಿಮಾ. 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬರುತ್ತಿದ್ದೇನೆ. ಈ ಮನೆಯಲ್ಲಿ ಮರೆಯಲಾರದ ತುಂಬಾ ನೆನಪುಗಳಿವೆ ಎನ್ನುತ್ತಾ ಪ್ರತಿಯೊಂದು ದೃಶ್ಯ ತೆಗೆದಿರುವ ಸ್ಥಳವನ್ನು ಒಂದೊಂದಾಗಿ ಪರಿಚಯ ಮಾಡಿಸುತ್ತಾ ಮನೆಯ ಒಳಗೆ ಓಡಾಡಿದ್ದಾರೆ. ಕೆಲವಷ್ಟು ನೆನಪುಗಳನ್ನು ಯಾವತ್ತು ಮರೆಯಲು ಸಾಧ್ಯವಿಲ್ಲ. ಅವುಗಳಲ್ಲಿ ಮೈ ಆಟೋಗ್ರಾಫ್ ಸಿನಿಮಾ ಕೂಡ ಒಂದಾಗಿದೆ ಎಂದು ಈ ವಿಡಿಯೋ ತುಣುಕಿನಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಸವಿಸವಿ ನೆನಪು ಎಂಬ ಹಾಡನ್ನು ಹಾಕಿಕೊಂಡಿದ್ದಾರೆ. ಆಟೊಗ್ರಾಫ್ ಸಿನಿಮಾದ ಸವಿ ಸವಿಯಾದ ನೆನಪುಗಳನ್ನು ಹಂಚಿಕೊಂಡಿರುವ ಸುದೀಪ್ ಅವರ ಇನ್‍ಸ್ಟಾಗ್ರಾಮ್ ಖಾತೆಯಲ್ಲಿರುವ ವಿಡಿಯೋ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೈ ಅಟೋಗ್ರಾಫ್ ಸುದೀಪ್ ನಿರ್ದೇಶನದ ಚಿತ್ರವಾಗಿದ್ದು, ಮೈ ಆಟೋಗ್ರಾಫ್‌ ಸಿನಿಮಾ ಯಾವಾಗಲೂ ನನ್ನ ಜೀವನದ ಒಂದು ಭಾಗವಾಗಿರುತ್ತದೆ. ಮುಂದೇ ನಾನು ಎಷ್ಟೇ ಸಿನಿಮಾಗಳನ್ನು ನಿರ್ದೇಶಿಸಿದರೂ, ಮೈ ಅಟೋಗ್ರಾಫ್ ಸಿನಿಮಾ (Cinema) ನನ್ನ ಪಾಲಿಗೆ ಸ್ಪೆಷಲ್‌’ ಎಂದಿದ್ದಾರೆ ಸುದೀಪ್‌. ಈ ಮನೆಗೆ ಭೇಟಿ ನೀಡಿದ ನಂತರ ಸುದೀಪ್ ಅವರು ಹಂಚಿಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಇದೀಗ ವೈರಲ್‌ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top