fbpx
ಸಮಾಚಾರ

ಮೆಗಾ ಫ್ಯಾಮಿಲಿಗೆ ಕೊರಾನಾಘಾತ: ರಾಮ್ ಚರಣ್‌ ಜೊತೆ ಪಾರ್ಟಿ ಮಾಡಿದ್ದ ನಟ ವರುಣ್‌ಗೂ ಕೊರೋನಾ ಪಾಸಿಟಿವ್

ಮೆಗಾಸ್ಟಾರ್​ ಚಿರಂಜೀವಿ ಅವರ ಮಗ ರಾಮ್​ ಚರಣ್​ ಅವರಿಗೆ ಕೊರೋನಾ ಪಾಸಿಟಿವ್​ ಆದ ಹಿನ್ನಲೆಯಲ್ಲೇ ಅವರು ಹೋಂ ಕ್ವಾರಂಟೈನ್​ ಆಗಿದ್ದಾರೆ. ಈ ಕುರಿತಂತೆ ನಿನ್ನೆ ಬೆಳಿಗ್ಗೆಯಷ್ಟೆ ರಾಮ್​ ಚರಣ್​ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಅವರ ಕಸಿನ್ ಹಾಗೂ ನಾಗಬಾಬು ಅವರ ಮಗ ವರುಣ್​ ತೇಜ್​ ಸಹ ಕೋವಿಡ್​ ಪಾಸಿಟಿವ್​ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯದ ಕುರಿತು ತಮಗೆ ಕೊರೋನಾ ಪಾಸಿಟಿವ್ ಬಂದಿರೋದಾಗಿ ಇನ್ಸ್ಟಾಗ್ರಾಮ್‌ನಲ್ಲಿ ವರುಣ ತೇಜ ಅವರು ತಿಳಿಸಿದ್ದಾರೆ. ಕೆಲವು ಸಣ್ಣ ಲಕ್ಷಣಗಳಿದ್ದಾಗಲೇ ನನಗೆ ಕೊರೋನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ನಾನು ಈಗ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. ನಾನು ಬೇಗ ಹುಶಾರಾಗಿ ಮರಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಸ್ ಎಂದು ಬರೆದಿದ್ದಾರೆ.

ಕ್ರಿಸ್‌ಮಸ್‌ ಪಾರ್ಟಿ ಮಾಡಿದ್ದ ಚಿರು ಫ್ಯಾಮಿಲಿ
ಡಿ.24ರ ಸಂಜೆ ಮೆಗಾ ಫ್ಯಾಮಿಲಿ ಕ್ರಿಸ್‌ಮಸ್ ಪಾರ್ಟಿ ಮಾಡಿತ್ತು. ಅದರಲ್ಲಿ ರಾಮ್‌ ಚರಣ್‌ ಮತ್ತು ವರುಣ್ ತೇಜ್ ಕೂಡ ಭಾಗವಹಿಸಿದ್ದರು. ಅಲ್ಲು ಅರ್ಜುನ್, ಅಲ್ಲು ಸಿರೀಶ್, ಸಾಯಿ ಧರಮ್ ತೇಜ್, ಈಚೆಗಷ್ಟೇ ಮದುವೆಯಾದ ನಿಹಾರಿಕಾ ದಂಪತಿ ಕೂಡ ಹಾಜರಿದ್ದರು. ಹಾಗಾಗಿ, ಅವರೆಲ್ಲರೂ ಕೂಡ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top