fbpx
ಸಮಾಚಾರ

“ಬೀದಿ ಬೀದಿಯಲ್ಲೂ ವಿಷ್ಣು ಪುತ್ಥಳಿ ಬೇಡ” ಭಾರತಿ ವಿಷ್ಣುವರ್ಧನ್​

ಇತ್ತೀಚೆಗೆ ಬೆಂಗಳೂರಿನ ಟೋಲ್ ಗೇಟ್ ಬಳಿ ವಿಷ್ಣುವರ್ಧನ್ ಪುತ್ಥಳಿ ಧ್ವಂಸವಾಗಿದ್ದು, ಇದನ್ನು ಅಪಮಾನವೆಂದು ಭಾವಿಸದೆ, ಆಶೀರ್ವಾದದಂತೆ ಪರಿಗಣಿಸೋಣ ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. ಬೀದಿ ಬೀದಿಯಲ್ಲೂ ನಮ್ಮ ಯಜಮಾನ್ರ ಪುತ್ಥಳಿ ಇಡೋಕೆ ನಾನು ಇಷ್ಟಪಡಲ್ಲ.

ಮೈಸೂರಿನಲ್ಲಿ ವಿಷ್ಣು ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯಿಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದವನ್ನು ಹೇಳುತ್ತೇನೆ. ಎಲ್ಲರ ಮನದಲ್ಲಿಯೂ ವಿಷ್ಣು ಇದ್ದಾರೆ ಎಂದರು. ಹಾಗೆಯೆ ” ಅದು ವಿಷ್ಣುವರ್ಧನ್‌ಗೂ ಇಷ್ಟ ಇರಲಿಲ್ಲ. ಅಭಿಮಾನದಿಂದ ಇಡಬೇಕಂದ್ರೆ ಕೇಳಿ-ಮಾಡಿ ಇಟ್ಟರೆ ಸಂತೋಷ ಎಂದರು.

‘ಬೀದಿಬೀದಿಯಲ್ಲಿ ಪ್ರತಿಮೆ ಇಡುವುದು ವಿಷ್ಣುವರ್ಧನ್ ಅವರಿಗೂ ಇಷ್ಟ ಇರಲಿಲ್ಲ. ಅಭಿಮಾನದಿಂದ ಪ್ರತಿಮೆ ಸ್ಥಾಪಿಸುತ್ತೇವೆ ಎನ್ನುವುದಾದರೆ ಅದನ್ನು ಸಮರ್ಪಕವಾಗಿ ಮಾಡಬೇಕು. ಪುತ್ಥಳಿ ಧ್ವಂಸವನ್ನು ಅವಮಾನ ಎಂದುಕೊಳ್ಳದೇ ಆಶೀರ್ವಾದ ಎಂದುಕೊಳ್ಳಬೇಕು. ಧ್ವಂಸ ಮಾಡಿದವರ ವಿರುದ್ಧ ಮಾತನಾಡದಿರುವುದೇ ಉತ್ತಮ’ ಎಂದು ಹೇಳಿದರು.

‘ಯಾರ ಯಾರ ಮನಸ್ಸಿನಲ್ಲಿ ಏನೇನು ಇದೆಯೋ ಅದು ನಮಗೆ ಗೊತ್ತಾಗುವುದಿಲ್ಲ. ಅವರಿಗೆ ಅನಿಸಿದ್ದನ್ನು ಅವರು ಮಾಡುತ್ತಾರೆ. ವಿಷ್ಣುವರ್ಧನ್ ಕುರಿತು ಏನೇ ಹೇಳಿದರೂ ಅದು ಜನಪ್ರಿಯತೆ ತಂದುಕೊಡುತ್ತದೆ ಎಂದು ಕೆಲವರು ಭಾವಿಸಿದ್ದಾರೆ’ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top