fbpx
ಸಮಾಚಾರ

ನಿರ್ದೇಶಕ ಪವನ್ ಒಡೆಯರ್ ಪುತ್ರನ ನಾಮಕರಣ; ಏನೆಂದು ಹೆಸರಿಟ್ಟಿದ್ದಾರೆ?

ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ದಂಪತಿ ಗಂಡು ಮಗು ಹುಟ್ಟಿರುವ ವಿಚಾರ ಗೊತ್ತೇ ಇದೆ. ಇದೀಗ ದಂಪತಿ ತಮ್ಮ ಮುದ್ದಿನ ಮಗನಿಗೆ ಹೆಸರಿಟ್ಟಿದ್ದಾರೆ. ಹೌದು. ತಮ್ಮ ಮಗನ ಹೆಸರನ್ನು ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ ‘ಶೌರ್ಯ’ ಎಂದು ಹೆಸರಿಟ್ಟಿದ್ದಾರೆ.

 

 

ಡಿಸೆಂಬರ್ 10ರಂದು ಪವನ್ ತಮ್ಮ ಹುಟ್ಟುಹಬ್ಬರದ ದಿನವೇ ಕುಟುಂಬಕ್ಕೆ ಪುತ್ರನನ್ನು ಬರ ಮಾಡಿಕೊಂಡರು. ಡಬಲ್ ಧಮಾಕದಲ್ಲಿರುವ ಫ್ಯಾಮಿಲಿ 20 ದಿನಗಳ ಬಳಿಕ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಪುತ್ರನಿಗೆ ತೊಟ್ಟಿಲ ಶಾಸ್ತ್ರವನ್ನೂ ಮಾಡಲಾಯಿತು. ಹೂಗಳ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಕ್ಯೂಟ್​ ಚಿತ್ರಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top