fbpx
ಸಮಾಚಾರ

ಸುದೀಪ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.

ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುದೀಪ್ ಜೊತೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕೇರಳ ಶೆಡ್ಯೂಲ್​ ನಂತ್ರ ಬೆಂಗಳೂರಿನಲ್ಲಿ ಸೆಟ್​ ಹಾಕಿ ಫ್ಯಾಂಟಮ್ ಚಿತ್ರದ​ ಸ್ಪೆಷಲ್​​ ಸಾಂಗ್​ ಶೂಟಿಂಗ್​ಗೆ​​​ ಪ್ಲಾನ್ ಮಾಡಲಾಗಿದೆ.. ಅಜನೀಶ್​ ಲೋಕನಾಥ್​ ಚಿತ್ರಕ್ಕೆ ಟ್ಯೂನ್​ ಹಾಕ್ತಿದ್ದು, ಐಟಂ ಸಾಂಗ್​​ನ ದೊಡ್ಡ ಮಟ್ಟದಲ್ಲಿ ಶೂಟ್​ ಮಾಡೋ ಲೆಕ್ಕಾಚಾರದಲ್ಲಿದೆ ಚಿತ್ರತಂಡ..

ಅಂದಹಾಗೆ ಈ ಹಿಂದೆ ಫ್ಯಾಂಟಮ್ ನ ವಿಶೇಷ ಹಾಡಿನಲ್ಲಿ ಸುದೀಪ್ ಜೊತೆ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ ಅಥವಾ ನೋರಾ ಫತೇಹಿ ಹೆಜ್ಜೆಹಾಕಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇಬ್ಬರಲ್ಲಿ ಒಬ್ಬರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿತ್ತು. ಅಲ್ಲದೆ ಈ ಬಗ್ಗೆ ಚಿತ್ರದ ನಿರ್ಮಾಪಕ ಜಾಕ್ ಮಂಜು ಸಹ ಸ್ಪಷ್ಟಪಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top