fbpx
ಸಮಾಚಾರ

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ್ದ ಅಂಗಡಿಗೆ ಬೆಂಕಿ ಹಾಕಿದ ನಾಡದ್ರೋಹಿಗಳು

ಇತ್ತೀಚೆಗೆ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನಾಡ ಧ್ವಜ ಹಾರಿಸಿದ ಕನ್ನಡ ಪರ ಹೋರಾಟಗಾರನ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀನಿವಾಸ ತಾಳೂಕರ ಅವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯವೆಸಗಿದ್ದಾರೆ.

ಬೆಂಕಿ ಹಚ್ಚಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಲೀಕ ಶ್ರೀನಿವಾಸ ತಾಳೂಕರ ಮತ್ತು ಅವರ ಕುಟುಂಬದ ಸದಸ್ಯರು ಬೆಂಕಿ ನಂದಿಸಿದರು. ಈ ಅಂಗಡಿಯಲ್ಲಿ ಕನ್ನಡ ಬಾವುಟಗಳು, ಶಲ್ಯೆ, ತೋರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ ತಾಳೂಕರ “ನಾನು ಎಂದಿಗೂ ಭಾಷಾ ದ್ವೇಷ ಮಾಡಿಲ್ಲ. ಇಂತಹ ಬೆದರಿಕೆಗೆ ಹಾಗೂ ಬೆಂಕಿ ಹಚ್ಚಿದ್ದಕ್ಕೆ ಹೆದರುವುದಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ನಾನು ಹೋರಾಟ ಮಾಡುತ್ತಿಲ್ಲ” ಎಂದು ಹೇಳಿದರು.

“ನನ್ನ ಅಂಗಡಿಗೆ ಬೆಂಕಿ ಹಚ್ಚುವ ಕೆಲಸಕ್ಕೆ, ಬೆದರಿಕೆಗೆ ನಾನು ಹೆದರುವುದಿಲ್ಲ. ಬೆಳಗಾವಿ ಪಾಲಿಕೆ ಕಚೇರಿ ಎದುರು ಕನ್ನಡ ಬಾವುಟ ಹಾರಿಸಬೇಕೆಂಬುವುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು. ಇದೀಗ ಅದು ನನಸಾಗಿದೆ. ಪಾಲಿಕೆ ಎದುರು ಸ್ಥಾಪಿಸಲಾಗಿದ್ದ ಕನ್ನಡ ಧ್ವಜಸ್ತಂಭ ಕಾಯುತ್ತ, ಕುಳಿತುಕೊಂಡಿದ್ದೆ. ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ, ಹೊಸ ವರ್ಷಾಚರಣೆ ಮಾಡಿ ಮನೆಗೆ ತೆರಳಿದ್ದೆ. ಈ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top