fbpx
ಸಮಾಚಾರ

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 6506 ಗ್ರೂಪ್ ಬಿ & ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಿದೆ. ವಿವಿಧ ಅಧಿಕಾರಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಜನವರಿ 31, 2021ರೊಳಗೆ ಸಲ್ಲಿಸಬಹುದು.

ಸಿಬ್ಬಂದಿ ನೇಮಕಾತಿ ಆಯೋಗದಿಂದ ವಿವಿಧ ಸಚಿವಾಲಯಗಳು/ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 6506 ಗ್ರೂಪ್ ‘ಬಿ’ & ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:
ಅಂಗೀಕೃತ ಸಂಸ್ಥೆಯಿಂದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು (Any Degree)

ವಯೋಮಿತಿ:
18 ರಿಂದ 32 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ಟಿ ಅಭ್ಯರ್ಥಿ 5 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ಇರಲಿದೆ.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ ಒಬಿಸಿ/ಇತರೆ: 100ರು

ಆಯ್ಕ ವಿಧಾನ:
ಅಭ್ಯರ್ಥಿಗಳನ್ನು 4 ಹಂತದ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Tier – 1 ಕಂಪ್ಯೂಟರ್ ಆಧಾರಿತ ಮೊದಲ ಹಂತದ ಪರೀಕ್ಷೆ
Tier – 2 ಕಂಪ್ಯೂಟರ್ ಆಧಾರಿತ ಎರಡನೇ ಹಂತದ ಪರೀಕ್ಷೆ
Tier – 3 ಲಿಖಿತ ಪರೀಕ್ಷೆ (Descriptive Test)
Tier – 4 ಕಂಪ್ಯೂಟರ್ ಟೆಸ್ಟ್, ಮತ್ತು ಡೇಟಾ ಎಂಟ್ರಿ ಸ್ಕಿಲ್ ಟೆಸ್ಟ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top