fbpx
ಸಮಾಚಾರ

ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ ನಟಿ ಸಂಜನಾ ಗಲ್ರಾನಿ!

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ 1 ತಿಂಗಳ ಬಳಿಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರೀತಿಯ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 

 

ಸಂಜನಾ ಗಲ್ರಾನಿ ಪೋಸ್ಟ್ ನಲ್ಲಿ ಏನಿತ್ತು ?
ನನಗೆ ಮೆಸೇಜ್ ಕಳುಹಿಸಿರುವ ಪ್ರತಿಯಿಬ್ಬರಿಗೂ ಧನ್ಯವಾದಗಳು. ಪ್ರತಿಯೊಬ್ಬರ ಮೆಸೇಜ್ ಅನ್ನು ನಾನು ಓದಿದ್ದೇನೆ. ನೀವು ತೋರಿಸಿದ ಕಾಳಜಿ ನೋಡಿ ನಾನು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಅನಿಸಿತು. ನನ್ನ ಒಂದು ಮಿಲಿಯನ್ ಫಾಲೋವರ್ಸ್ ಗೂ ಧನ್ಯವಾದ. ನನ್ನ ಆರೋಗ್ಯ ಸುಧಾರಿಸುತ್ತಿದ್ದಂತೆ ಸೊಶಿಯಲ್ ಮಿಡಿಯಾಗೆ ಮರಳುತ್ತೇನೆ. ನೀವು ತೋರಿಸಿದ ಪ್ರೀತಿಗೆ ನಿಮಗೆ ನನ್ನ ಕುಟುಂಬ ವರ್ಗಕ್ಕೆ , ಸ್ನೇಹಿತರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಂಜನಾ ಪೋಸ್ಟ್ ಹಾಕಿದ್ದಾರೆ. .

3 ತಿಂಗಳು ಜೈಲು ವಾಸ
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ವಶಕ್ಕೆ ಪಡೆದಿದ್ದರು. ತದನಂತರದಲ್ಲಿ ಅವರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಮೂರು ತಿಂಗಳ ಜೈಲುವಾಸದ ನಂತರದಲ್ಲಿ ಸಂಜನಾಗೆ ಕರ್ನಾಟಕ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top