fbpx
ಸಮಾಚಾರ

‘ರಿಂಗ್ ಮಾಸ್ಟರ್’ ಚಿತ್ರದ ನಟಿ ಶ್ವೇತಾ ಕುಮಾರಿ ಅರೆಸ್ಟ್

ಡ್ರಗ್ಸ್ ದಂಧೆ ಎಲ್ಲೆಲ್ಲಿ ಬೇರು ಬಿಟ್ಟಿದೆ ಅನ್ನೋದೇ ತನಿಖಾಧಿಕಾರಿಗಳಿಗೆ ತಿಳಿಯದಾಗಿದೆ. ಯಾಕೆಂದರೆ ಬಗೆದಷ್ಟು ಈ ಮಾಫಿಯಾ ಆಳಕ್ಕೆ ಹೋಗುತ್ತಿದೆ. ಒಬ್ಬೊಬ್ಬರೇ ಈ ದಂಧೆಯಲ್ಲಿ ಲಾಕ್ ಆಗ್ತಿದ್ದಾರೆ. ಹೀಗೆ ಮತ್ತೊಬ್ಬ ನಟಿ ಎನ್​ಸಿಬಿ ಬಲೆಗೆ ಬಿದ್ದಿದ್ದು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ. ನಟಿ ಶ್ವೇತ ಕುಮಾರಿ ಬಂಧನಕ್ಕೊಳಗಾದ ನಟಿ.

ಟಾಲಿವುಡ್ ಮೂಲದ ನಟಿ ಶ್ವೇತ ಕುಮಾರಿ ಕನ್ನಡದ ರಿಂಗ್ ಮಾಸ್ಟರ್ ಚಿತ್ರದಲ್ಲಿ ನಟಿಸಿದ್ದಾರೆ. ಎರಡು ದಿನಗಳ ಹಿಂದೆ ಹೈದರಾಬಾದ್​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದವರು ಕೊಟ್ಟ ಮಾಹಿತಿಯ ಮೇರೆಗೆ ಇಂದು ನಟಿ ಶ್ವೇತಾ ಕಮಾರಿಯನ್ನ ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆಯ ನಂತರ ನಟಿಯನ್ನ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಶ್ವೇತಾ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಲ್ಲದೆ ಮಾರಾಟ ಕೂಡ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯ್ಲಲಿ ಡ್ರಗ್ ಪೆಡ್ಲರ್ ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ನಟಿಯ ಬಂಧನದ ವೇಳೆ 10 ಲಕ್ಷ ನಗದು, 10 ಗ್ರಾಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಮೊಬೈಲ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕಾಲ್ ಡೀಟೈಲ್ಸ್, ನಂಬರ್ಸ್ ಹಾಗೂ ಚಾಟ್ಸ್ ಪರಿಶೀಲನೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top