fbpx
ಸಮಾಚಾರ

ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ! ಹೊಸ ತಂತ್ರಜ್ಞಾನದಲ್ಲಿ ಬರುತ್ತಿದ್ದಾರೆ ‘ಭಾಗ್ಯವಂತರು’

ಕನ್ನಡ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಚಿತ್ರ ಡಾ.ರಾಜ್ ಅಭಿನಯದ ‘ಭಾಗ್ಯವಂತರು’. ಈ ಚಿತ್ರ ನೂತನ ತಂತ್ರಜ್ಞಾನದಲ್ಲಿ ಮತ್ತೆ ಅಭಿಮಾನಿಗಳೆದರು ಬರಲು ಸಿದ್ಧವಾಗಿದೆ. 1977ರಲ್ಲಿ ತೆರೆಕಂಡಿದ್ದ ‘ಭಾಗ್ಯವಂತರು’ ಚಿತ್ರಕ್ಕೆ ಈಗ ಸಿನಿಮಾ ಸ್ಕೋಪ್ 7.1 ಡಿಐ ತಂತ್ರಜ್ಞಾನ‌ ಬಳಸಿಕೊಳ್ಳಲಾಗಿದೆ.

ಬೆಂಗಳೂರಿನ ‘ನರ್ತಕಿ’ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತ ‌100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭಾಗ್ಯವಂತರು’ ಚಿತ್ರ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ‘ಆಪರೇಷನ್ ಡೈಮಂಡ್ ರಾಕೆಟ್’, ‘ನಾನೊಬ್ಬ ಕಳ್ಳ’, ‘ರಾಜ‌ ನನ್ನ ರಾಜ’, ‘ದಾರಿ ತಪ್ಪಿದ’ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು ಅವರು ತಮ್ಮ ‘ಮುನೇಶ್ವರ ಫಿಲಂಸ್’ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಪ್ರಸ್ತುತ ‘ಕೃಷ್ಣಾಚಾರಿ’ ಚಿತ್ರದ ನಿರ್ಮಾಪಕರೂ ಆಗಿರುವ ಮುನಿರಾಜು ಅವರು, ‘ನನಗೆ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಬಗ್ಗೆ ವಿಶೇಷ ಗೌರವ. ಅವರೇ ನನಗೆ ಭಾಗ್ಯವಂತರು’ ಎಂದು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top