fbpx
ಸಮಾಚಾರ

ಜನವರಿ 10ರಂದು ಫೇಸ್​ಬುಕ್​ನಲ್ಲಿ ಲೈವ್​ ಬರಲಿದ್ದಾರೆ ದರ್ಶನ್

ಚಿತ್ರಮಂದಿರಗಳು ಆರಂಭವಾದಾಗಿನಿಂದ ಯಾವ ಸ್ಟಾರ್ ನಟನ ಸಿನಿಮಾಗಳೂ ರಿಲೀಸ್​ ಆಗಿಲ್ಲ. ಆದರೆ ಈಗ ಒಂದೊಂದೇ ಚಿತ್ರತಂಡಗಳು ರಿಲೀಸ್ ದಿನಾಂಕ ಪ್ರಕಟಿಸುತ್ತಿದೆ. ಆದರೆ ರಾಬರ್ಟ್​ ಸಿನಿಮಾದ ರಿಲೀಸ್​ ದಿನಾಂಕ ಇನ್ನೂ ನಿಗದಯಾಗಿಲ್ಲ. ಆದರೆ ಈ ಚಿತ್ರ ಏಪ್ರಿಲ್​ನಲ್ಲಿ ರಿಲೀಸ್​ ಆಗಬಹುದು ಎನ್ನಲಾಗುತ್ತಿದೆ. ಹೀಗಿರುವಾಗಲೇ ದರ್ಶನ್​ ತಮ್ಮ ಸೆಲೆಬ್ರಿಟಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ನಟ ದರ್ಶನ್ ಅವರು ಸರ್ಪ್ರೈಸ್ ಸುದ್ದಿಯೊಂದು ನೀಡಿದ್ದಾರೆ. ಜನವರಿ 10 ರಂದು ಡಿ ಬಾಸ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ವಿಶೇಷತೆ ಏನು ಎಂಬುದು ಸದ್ಯಕ್ಕೆ ತಿಳಿದಿಲ್ಲ. ಆದರೆ, ದರ್ಶನ್ ಅವರ ಫೇಸ್‌ಬುಕ್‌ ಲೈವ್‌ಗಾಗಿ ಅಭಿಮಾನಿಗಳು ಕಾಯುವಂತಾಗಿದೆ.

ಈ ಕುರಿತು ದರ್ಶನ್ ಅವರ ಅಭಿಮಾನಿ ಸಂಘದ ಫೇಸ್‌ಬುಕ್ ಖಾತೆ ಡಿ ಕಂಪನಿ ಮಾಹಿತಿ ನೀಡಿದ್ದು, ”ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ: ನಮ್ಮೆಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ” ಎಂದು ತಿಳಿಸಿದ್ದಾರೆ.

ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಸಿನಿಮಾದ ಚಿತ್ರೀಕರಣ ಮುಗಿದಿದೆ. ಉಮಾಪತಿ ನಿರ್ಮಾಣದ ಸಿನಿಮಾ ಇನ್ನೇನು ರಿಲೀಸ್​ ಹಂತದಲ್ಲಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆ ಆಶಾ ಭಟ್​, ಜಗಪತಿ ಬಾಬು ನಟಿಸಿದ್ದಾರೆ. ಗಂಡುಗಲಿ ವೀರ ಮದಕರಿ ನಾಯಕ ಸಿನಿಮಾವನ್ನು ರಾಜೇಂದ್ರ ಸಿಂಗ್​ ಬಾಬು ನಿರ್ದೇಶಿಸುತ್ತಿದ್ದು, ರಾಕ್​ಲೈನ್​ ವೆಂಕಟೇಶ್​ ಹಣ ಹೂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top