fbpx
ಸಮಾಚಾರ

ಕಾಂಗ್ರೆಸ್ ಬಿಡ್ತಿದ್ದೀನಿ, ಜೆಡಿಎಸ್‍ಗೆ ಹೋಗ್ತಿದ್ದೀನಿ: ಸಿಎಂ ಇಬ್ರಾಹಿಂ

“ಕಾಂಗ್ರೆಸ್ ತೊರೆದು ನಾನು ಜೆಡಿಎಸ್‍ಗೆ ಹೋಗುತ್ತಿದ್ದೇನೆ” ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಹೇಳುತ್ತಿರುವಂತೆ ನನಗೆ ಏನಾದರು ಆಗಬೇಕು ಎಂದು ಜೆಡಿಎಸ್ ಪಕ್ಷಕ್ಕೆ ನಾನು ಹೋಗುತ್ತಿಲ್ಲ. ದೇಶ ಮತ್ತು ರಾಜ್ಯಕ್ಕೆ ಏನಾದರೂ ಮಾಡಬೇಕು ಅಂತ ಹೋಗ್ತಿದ್ದೇನೆ ಎಂದು ತಿಳಿಸಿದರು.

ನಾನು ಇಂದು ದೇವೇಗೌಡರನ್ನು ಭೇಟಿಯಾಗುತ್ತೇನೆ. ಅವರ ಜೊತೆ ಈ ಎಲ್ಲಾ ವಿಚಾರದ ಬಗ್ಗೆ ಮಾತನಾಡುತ್ತೇನೆ. ದೇವೇಗೌಡರು ಕನ್ನಡದ ಮೇರು ವ್ಯಕ್ತಿತ್ವ. ಅವರ ಬಗ್ಗೆ ನಾವು ಹೆಮ್ಮೆ ಪಡಬೇಕು. ನನ್ನನ್ನು ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಭೇಟಿ ಮಾಡಿದ್ದು ನಿಜ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನನಗೆ ಒಳ್ಳೆಯ ಸ್ನೇಹಿತರು. ಅದೇ ರೀತಿ ಆರ್​ಎಸ್​ಎಸ್​ನವರು ಕೂಡ ನನಗೆ ಸ್ನೇಹಿತರು ಅದಕ್ಕೇ ಅವರು ನನ್ನ ಮನೆಗೆ ಬಂದಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

“ಲವ್ ಜಿಹಾದ್ ಬಗ್ಗೆ ಮಾತನಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಲವ್ ಅಂದರೆ ಏನು ಅಂತ ಗೊತ್ತಿದ್ಯಾ? ಅವರಿಗೆ ಮದುವೆ ಆಗಿದ್ಯಾ? ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ? ಅವನಿಗೆ ಹೆಂಡತಿ, ಮಕ್ಕಳ ಬಗ್ಗೆ ಅರಿವಿದೆಯಾ? ಪ್ರೀತಿ, ಸಂಸಾರದ ಬಗ್ಗೆ ಏನೂ ಅನುಭವ ಇಲ್ಲದ ಅವರು ಲವ್ ಜಿಹಾದ್ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕೂಡ ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top