fbpx
ಸಮಾಚಾರ

ಕ್ಯಾನ್ಸರ್‌ ಮಕ್ಕಳಿಗಾಗಿ 14 ಇಂಚು ಉದ್ದದ ಕೂದಲನ್ನು ದಾನ ಮಾಡಿದ ಕಾರುಣ್ಯಾ!

ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ತಾವು ಕ್ಯಾನ್ಸರ್ ರೋಗಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕಾರುಣ್ಯ ತಮ್ಮ 14 ಇಂಚು ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ.

ಜೊಸ ವರ್ಷ 2021ರಲ್ಲಿ ಏನಆದರೂ ಉತ್ತಮ ಕೆಲಸ ಮಾಡಬೇಕೆಂದು ಬಯಸಿದ್ದ ನಟಿ ಕಾರುಣ್ಯ ರಾಮ್ ತಮ್ಮ ತೆಲೆಗೂದಲು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಮಾದರಿ ಎನಿಸಿದ್ದಾರೆ. ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮುಖೇನ ನಟಿ ತಲೆಗೂದಲು ದಾನ ನೀಡಿದ್ದಾರೆ.

 

 

ಕೂದಲು ದಾನ ಮಾಡಿರುವ ಪೋಸ್ಟ್‍ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಕಾರುಣ್ಯ ರಾಮ್, ನನ್ನ ಕೇಶರಾಶಿಯಲ್ಲಿ 14 ಇಂಚುಗಳಷ್ಟು ಉದ್ದದ ತಲೆಕೂದಲನ್ನು ಕ್ಯಾನ್ಸ್‍ರ್ ರೋಗಿಗಳಿಗೆ ನೀಡಿದ್ದೇನೆ. 2021 ರ ಆರಂಭದಲ್ಲಿ ಅವಶ್ಯತಕೆ ಇರುವವರಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡಿದ್ದೆನು ಅದರಂತೆ ಈ ಕಾರ್ಯವನ್ನು ಮಾಡಿದ್ದೇನೆ. ಇಷ್ಟು ಉದ್ದದ ಕೂದಲು ಬೆಳೆಯಬೇಕಾದರೆ ಸುಮಾರು ಮೂರು ವರ್ಷಗಳು ಬೇಕಾಗುತ್ತದೆ.

ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಕೂದಲು ಸ್ತ್ರೀಯತ್ವದ ಬಹುಮುಖ್ಯ ಭಾಗವಾಗಿದೆ. ಹೆಣ್ಣಿನ ಸೌಂದರ್ಯವನ್ನು ಎದ್ದು ಕಾಣುವಂತೆ ಕೇಶರಾಶಿ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಕೂದಲಿನ ಪ್ರತಿಯೊಂದು ಎಳೆಯನ್ನು ಪ್ರೀತಿಸುತ್ತೇನೆ. ಕ್ಯಾನ್ಸ್‍ರ್ ರೋಗಿಗಳಿಗಾಗಿ ಕೂದಲು ನೀಡುತ್ತಿದ್ದೇನೆ. ಇದು ಅಗತ್ಯವಿರುವವರನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಅವರ ಆರೋಗ್ಯದ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ . ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವೂ ನನ್ನೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top