fbpx
ಸಮಾಚಾರ

ಜನವರಿ 08: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 08, 2021 ಶುಕ್ರವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ 9:39 pm
ನಕ್ಷತ್ರ : ಸ್ವಾತಿ 2:12 pm
ಯೋಗ : ಧೃತಿ 6:11 pm
ಕರಣ : ವಾಣಿಜ 10:49 am ವಿಷ್ಟಿ 9:39 pm

Time to be Avoided
ರಾಹುಕಾಲ : 11:01 am – 12:26 pm
ಯಮಗಂಡ : 3:15 pm – 4:40 pm
ದುರ್ಮುಹುರ್ತ : 9:03 am – 9:48 am, 12:49 pm – 1:34 pm
ವಿಷ : 7:25 pm – 8:54 pm
ಗುಳಿಕ : 8:12 am – 9:37 am

Good Time to be Used
ಅಮೃತಕಾಲ : 4:21 am – 5:50 am
ಅಭಿಜಿತ್ : 12:03 pm – 12:49 pm

Other Data
ಸೂರ್ಯೋದಯ : 6:44 am
ಸುರ್ಯಾಸ್ತಮಯ : 6:08 pm
ರವಿರಾಶಿ : ಧನುಸ್
ಚಂದ್ರರಾಶಿ : ತುಲ

 

 

 
 

ಮೇಷ (Mesha)

ತೀರ್ಮಾನ ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ. ಗುರುಬಲವಿರುವುದರಿಂದ ಗುರು ಮಹಾರಾಜರು ನಿಮ್ಮಿಂದ ತಪ್ಪಾಗುವುದನ್ನು ತಪ್ಪಿಸುವರು. ಸ್ನೇಹಿತರು ಸಹಕಾರಗಳನ್ನು ನೀಡುವರು.

 

ವೃಷಭ (Vrushabha)

ಮಕ್ಕಳು ವಿದ್ಯಾಭ್ಯಾಸದಲ್ಲಿ ತೀವ್ರ ಪ್ರಗತಿ ಕಾಣುವರು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಗುರು-ಹಿರಿಯರ ಆಶೀರ್ವಾದದಿಂದ ಒಳಿತಾಗುವುದು.

 

ಮಿಥುನ (Mithuna)

ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಮನೆಯವರೇ ಬೆಂಬಲಿಸದೇ ಇದ್ದಲ್ಲಿ ಬೇಸರವಾಗುವುದು ಸಹಜ. ಆದರೆ ನೀವು ಎಲ್ಲಿ ಎಡವಿದ್ದೀರಿ ಎಂದು ಪರಾಮರ್ಶಿಸಿಕೊಳ್ಳಿರಿ. ಗೊಂದಲದ ಮನಸ್ಥಿತಿಯಿಂದ ಹೊರಬನ್ನಿರಿ.

 

ಕರ್ಕ (Karka)

ನೂತನ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ, ಮಾನಸಿಕ ನಿರಾಳತೆ, ಮಿತ್ರರ ಸಹಕಾರ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಗುರು-ಹಿರಿಯರ ಅಶೀರ್ವಾದ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮ.

 

ಸಿಂಹ (Simha)

ಆಸ್ತಿ ವ್ಯವಹಾರಗಳು ಚರ್ಚೆಗೆ ಬರಲಿವೆ. ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಯಾತ್ರಾ ಸಂಕಲ್ಪ ಈಡೇರುವ ಸಂಭವವಿದೆ. ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವಿರಿ. ಆರೋಗ್ಯ ಉತ್ತಮವಾಗಿರುವುದು.

 

ಕನ್ಯಾರಾಶಿ (Kanya)

ಕೆಲಸಗಾರರು ಸಕಾಲಕ್ಕೆ ಬರದೆ ಕೆಲಸದಲ್ಲಿ ಹಿನ್ನಡೆ. ಇದರಿಂದಾಗಿ ಬರಬೇಕಿದ್ದ ಲಾಭಾಂಶ ಕಡಿಮೆ ಆಗುವುದು. ಗುರುವಿನ ಕೃಪೆ ಹೊಂದಿರಿ. ಸಾಧ್ಯವಾದರೆ ಈದಿನ ಎಳ್ಳನ್ನು ದಾನ ಮಾಡಿರಿ.

 

ತುಲಾ (Tula)

ಆಯೋಜಿಸಿದ ಕಾರ್ಯಗಳಲ್ಲಿ ಹಿಮ್ಮುಖವಾಗುವ ಸಾಧ್ಯತೆ. ಆರ್ಥಿಕ ಸಂಕಷ್ಟ, ನಂಬಿದ ಸ್ನೇಹಿತರಿಂದ ನೆರವು ದೊರೆಯುವುದಿಲ್ಲ. ಸಂಗಾತಿಯ ಮುನಿಸಿನಿಂದ ಮನಸ್ಸಿಗೆ ಬೇಸರ ಉಂಟಾಗುವುದು. ಸಂಜೆಯ ವೇಳೆಗೆ ತುಸು ನೆಮ್ಮದಿ.

 

ವೃಶ್ಚಿಕ (Vrushchika)

ಸರ್ಕಾರಿ ಉನ್ನತಾಧಿಕಾರಿಗಳ ದರ್ಶನದಿಂದ ಲಾಭ. ಹಿರಿಯ ಅಧಿಕಾರಿಗಳು ಮಂತ್ರಿಗಳ ಕೃಪೆಯಿಂದ ಕಾರ್ಯಾನುಕೂಲ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

 

ಧನು ರಾಶಿ (Dhanu)

ದೂರದ ಬಂಧುಗಳು ತಾವಾಗಿ ಮಿತ್ರತ್ವದಿಂದ ನಿಮ್ಮ ಬಳಿಗೆ ಬರುವರು. ಹಣಕಾಸಿನ ಮುಗ್ಗಟ್ಟು ತೀವ್ರವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

 

ಮಕರ (Makara)

ಭವಿಷ್ಯದ ಹೊಸ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಕುಂಭರಾಶಿ (Kumbha)

ಇಂದು ನೀವು ಸಂತಸದ ಕ್ಷಣಗಳನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡಾ ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರು ಭೇಟಿ ಆಗುವ ಸಂಭವ. ಹಣಕಾಸಿನ ಸ್ಥಿತಿ ಉತ್ತಮ.

 

ಮೀನರಾಶಿ (Meena)

ಕೆಲಸಗಾರರೊಂದಿಗೆ ಸ್ನೇಹದಿಂದ ವರ್ತಿಸಿರಿ. ಮೃದು ಮಾತುಗಳಿಂದ ಅವರನ್ನು ಗೆಲ್ಲುವ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಿರಿ. ಆಗ ನಿಮಗೆ ಸಾಕಷ್ಟು ಅನುಕೂಲವಾಗುವುದು. ಪ್ರತಿಫಲದ ಬಗ್ಗೆ ಯೋಚಿಸದೆ ಕಾರ್ಯಪ್ರವೃತ್ತರಾಗಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top