fbpx
ಸಮಾಚಾರ

ರಾಷ್ಟ್ರಗೀತೆ ವೇಳೆ ಕಣ್ಣೀರಿಡಲು ಕಾರಣ ತಿಳಿಸಿದ ವೇಗಿ ಮೊಹಮ್ಮದ್‌ ಸಿರಾಜ್!

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಇನ್ನು ಪಂದ್ಯಕ್ಕೂ ಮುನ್ನ ಉಭಯ ತಂಡಗಳು ರಾಷ್ಟ್ರಗೀತೆ ಆಡುವ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದು ಕಣ್ಣೀರು ಸುರಿಸಿದ್ದಾರೆ.

 

 

ಹೌದು.. ಕಳೆದ ವಾರವಷ್ಟೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಬಲಗೈ ವೇಗಿ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿ ಕಣ್ಣೀರು ಒರೆಸುತ್ತಿದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಸಿರಾಜ್ ಕಣ್ಣೀರಿಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆದ ಕಾರಣ. ಹೀಗಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಪರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಸಿರಾಜ್‌ ಅವರನ್ನೇ ಕಳುಹಿಸಲಾಗಿತ್ತು.

“ರಾಷ್ಟ್ರಗೀತೆ ಹಾಡುವಾಗ ನಾನು ನನ್ನ ತಂದೆಯನ್ನು ನೆನೆದೆ. ಹೀಗಾಗಿ ಭಾವನೆಗಳನ್ನು ನಿಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಟೆಸ್ಟ್‌ ಕ್ರಿಕೆಟ್‌ ಆಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಅವರು ಇಂದು ಬದುಕಿದ್ದರೆ ನಾನು ಟೆಸ್ಟ್‌ ಆಡುವುದನ್ನು ನೋಡಿರುತ್ತಿದ್ದರು,” ಎಂದು ಪತ್ರಿಕಾಗೋಷ್ಠಿಯಲ್ಲಿ ಸಿರಾಜ್‌ ಹೇಳಿಕೊಂಡಿದ್ದಾರೆ.

ಅಂದಹಾಗೆ ಆಸಿಸ್​ ನೆಲದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಪ್ರಾರಂಭದ ಮೊದಲು ತನ್ನ ತಂದೆಯನ್ನು ಕಳೆದುಕೊಂಡ ಸಿರಾಜ್‌ಗೆ ಇದು ಒಂದು ಭಾವನಾತ್ಮಕ ಸರಣಿ ಯಾಗಿದೆ. ಸಿರಾಜ್​ಗೆ ತನ್ನ ಮನೆಗೆ ಹಿಂದಿರುಗುವ ಆಯ್ಕೆಯನ್ನು ನೀಡಲಾಗಿದ್ದರೂ ಸಹ ಅವರು ಆಸಿಸ್​ ನಾಡಲ್ಲೇ ಉಳಿದು ಟೆಸ್ಟ್​ ಆಡಲು ನಿರ್ಧರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top