fbpx
ಸಮಾಚಾರ

ಸಿನಿಮಾ ಕಾರ್ಮಿಕರಿಗೆ 100 ಸ್ಮಾರ್ಟ್ ಫೋನ್ ಗಿಫ್ಟ್ ನೀಡಿದ ಸೋನು ಸೂದ್

ಬಾಲಿವುಡ್ ಚಿತ್ರನಟ ಸೋನು ಸೂದ್ ಅವರ ಔದಾರ್ಯ ಚಿತ್ರರಂಗಕ್ಕೂ ವ್ಯಾಪಿಸಿದೆ. ಸೋನು ಸೂದ್ ಈವರೆಗೆ ಜನ ಸಾಮಾನ್ಯರಿಗೆ ಹಲವಾರು ರೀತಿಯಲ್ಲಿ ನೆರವು ಕಲ್ಪಿಸಿರುವುದನ್ನು ನೋಡಿದ್ದೇವೆ. ಆದರೆ, ಈಗ ಅವರು ಸಿನಿಮಾ ರಂಗದ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಹೊಸದಾಗಿ ಅವರು ಅಭಿನಯಿಸುತ್ತಿರುವ “ಆಚಾರ್ಯ” ತೆಲುಗು ಚಿತ್ರದ ಸೆಟ್ ನಲ್ಲಿ ಚಿತ್ರದ ಯೂನಿಟ್ ಸದಸ್ಯರಿಗೆ ಸೆಲ್ ಪೋನ್ ವಿತರಿಸಿದ್ದಾರೆ.

 

 

‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು, ಈಚೆಗೆ ಆ ಸಿನಿಮಾದ ಕೆಳ ಹಂತದ ನೂರು ಕಾರ್ಮಿಕರಿಗೆ ಸ್ಮಾರ್ಟ್ ಫೋನ್ ಗಿಫ್ಟ್ ನೀಡಿದ್ದಾರೆ. ಕಳೆದ ಹಲವಾರು ತಿಂಗಳಿನಿಂದ ಶೂಟಿಂಗ್ ನಿಂತುಹೋಗಿ ದಿನಗೂಲಿ ಕಾರ್ಮಿಕರಿಗೆ ತುಂಬ ಸಮಸ್ಯೆ ಆಗಿತ್ತು. ಇದರಿಂದ ಅವರ ದೈನಂದಿನ ಜೀವನದಲ್ಲಿ ಖುಷಿಯೇ ಇಲ್ಲದಂತೆ ಆಗಿತ್ತು. ಇದೀಗ ಸೋನು ಅವರಿಗೆಲ್ಲ ಸ್ಮಾರ್ಟ್ ಫೋನ್ ಗಿಫ್ಟ್ ನೀಡುವ ಮೂಲಕ ಒಂದು ಸಣ್ಣ ಖುಷಿ ತರಿಸುವ ಪ್ರಯತ್ನ ಮಾಡಿದ್ದಾರೆ.

ಸೊನು ಸುದ್ ಅವರು ಮೊಬೈಲ್ ತರಿಸಿ ಚಿತ್ರತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬರಲು ಹೇಳಿದ್ದರೆ. ಈ ವಿಚಾರ ತಿಳಿಯದೆ ಇರುವ ಕಾರ್ಮಿಕರು ಗೊಂದಲ ಮತ್ತು ಆಶ್ಚರ್ಯದಿಂದ ಬಂದಿದ್ದಾರೆ. ಸೋನುಸೂದ್ ಅವರು ಸ್ಮಾರ್ಟ್ ಫೋನ್ ಹಂಚುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಂತೋಷಪಟ್ಟಿದ್ದಾರೆ. ಸೋನು ಅವರ ಕೈಯಿಂದ ಮೊಬೈಲ್ ಪಡೆದುಕೊಂಡ ಕಾರ್ಮಿಕರು ಖುಷಿಯಿಂದ ಕೂಗಾಡಿದ್ದಾರೆ. ಸೋನು ಅವರನ್ನು ಮನಸರೆ ಹರಿಸಿ ಹಾರೈಸಿದ್ದಾರೆ. ಸ್ಮಾಟ್ ಫೋನ್‍ಗಳನ್ನು ಸ್ವೀಕರಿಸಿದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top