fbpx
ಸಮಾಚಾರ

ಬೆಳಗಾವಿ ದಂಪತಿಯ ಮಗುವಿಗೆ ”ಕನ್ನಡ” ಎಂದು ಹೆಸರಿಟ್ಟ ಹಂಸಲೇಖ

ಇತ್ತೀಚಿಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಭಾವುಟ ಹಾರಿಸಲು ಕನ್ನಡ ಪರ ಹೋರಾಟಗಾರರು ಪಟ್ಟ ಶ್ರಮ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ, ಮರಾಠ ಪ್ರಾಭಾವವಿರುವ ಬೆಳಗಾವಿಯ ಗಡಿನಾಡ ದಂಪತಿ ತಮ್ಮ ಮಗುವಿಗೆ ”ಕನ್ನಡ” ಎಂದು ನಾಮಕರಣ ಮಾಡಿ ಕನ್ನಡತನ ಮೆರೆದಿದ್ದಾರೆ.

 

 

ಹೌದು, ಈ ನಾಮಕರಣಕ್ಕೆ ವೇದಿಕೆ ಆಗಿದ್ದು ಮಾತ್ರ ಕಲರ್ಸ್​ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ. ಬೆಳಗಾವಿಯ ನಿಪ್ಪಾಣಿಯಲ್ಲಿರೋ ಕಾಗವಾಡ ನಿವಾಸಿ ಸಿದ್ದು ಗೌಡ ಬಸಗೌಡ ಪಾಟೀಲ್ ಹಾಗೂ ಅಶ್ವಿನಿ ದಂಪತಿಯ ಕನ್ನಡ ಪ್ರೀತಿಗೆ ಈಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಲರ್ಸ್​ ಕನ್ನಡದ ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದ ವೇದಿಕೆಯಲ್ಲಿ ನಾದಬ್ರಹ್ಮ ಹಂಸಲೇಖ ಅವರು ಕನ್ನಡದ ಪುರೋಹಿತರಾದ ಹಿರೇಮಗಳೂರು ಕಣ್ಣನ್​ ಅವರ ಉಪಸ್ಥಿತಿಯಲ್ಲಿ ಈ ಹೆಣ್ಣು ಮಗುವಿಗೆ ಕನ್ನಡ ಎಂದು ನಾಮಕರಣ ಮಾಡಿದ್ದಾರೆ.

ರಂಜನಿ ರಾಘವನ್‌ ಮತ್ತು ಕಿರಣ್‌ ರಾಜ್‌ ನಟನೆಯ ‘ಕನ್ನಡತಿ’ ಧಾರಾವಾಹಿ ಎಲ್ಲ ವರ್ಗದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಅದೇ ರೀತಿ ಬೆಳಗಾವಿಯ ಈ ದಂಪತಿ ಕೂಡ ‘ಕನ್ನಡತಿ’ಗೆ ಫಿದಾ ಆಗಿದ್ದಾರೆ. ತಮ್ಮ ಮಗುವಿಗೆ ಲೆಜೆಂಡರಿ ಸಂಗೀತ ನಿರ್ದೇಶಕರಿಂದ ನಾಮಕರಣ ಆಗಿದ್ದಕ್ಕೆ ಅವರು ಸಂತಸಪಟ್ಟಿದ್ದಾರೆ. ‘ಇದು ಇಡೀ ಕನ್ನಡನಾಡು ಆನಂದ ಭಾಷ್ಪ ಸುರಿಸುವಂತಹ ಸಂದರ್ಭ’ ಎಂದು ಹಂಸಲೇಖ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top