fbpx
ಸಮಾಚಾರ

‘ರಿಯಲ್ ಲೈಫ್ ಹೀರೊ’ ಸೋನು ಸೂದ್ ವಿರುದ್ಧ ಎಫ್ಐಆರ್ ದಾಖಲು: ಕಾರಣವೇನು ಗೊತ್ತಾ?

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ನೆರವಾಗುವ ಮೂಲಕ ಮನೆಮಾತಾಗಿರುವ ಬಾಲಿವುಡ್‌ ನಟ ಸೋನು ಸೂದ್‌ ಮೇಲೆ ದೂರು ದಾಖಲಾಗಿದ್ದು, ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನುಮತಿ ಪಡೆಯದೆಯೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ವಿರುದ್ಧ (ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್) ಬಿಎಂಸಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಗುರುವಾರ ತಿಳಿದುಬಂದಿದೆ.

 

 

ಸೋನು ಸೂದ್ ಪಾಲಿಕೆಯ ಅನುಮತಿ ಪಡೆಯದೇ ವಸತಿ ಕಟ್ಟಡವನ್ನು ಹೋಟೆಲ್‌ ಆಗಿ ಪರಿವರ್ತಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪಾಲಿಕೆ ಹಲವು ಬಾರಿ ಈ ವಿಷಯಕ್ಕೆ ಸಂಬಂಧಿಸಿ ಸೋನು ಅವರಿಗೆ ನೋಟಿಸ್‌ ನೀಡಿತ್ತು. ಆದರೆ ಸೋನು ಯಾವುದಕ್ಕೂ ಪ್ರಕ್ರಿಯೆ ನೀಡಿರಲಿಲ್ಲ. ಆ ಕಾರಣಕ್ಕೆ ಪಾಲಿಕೆ ಈಗ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಕಟ್ಟಡವನ್ನು ಆಕ್ರಮವಾಗಿ ಬಳಸಿಕೊಂಡಿದ್ದಾರೆ ಎಂಬ ಕಾರಣದಿಂದ ಸೋನು ಹಾಗೂ ಪತ್ನಿ ಸೋನಾಲಿ ಸೂದ್ ಮೇಲೆ ದೂರು ದಾಖಲಿಸಲಾಗಿದೆ.

ಈ ವಿಚಾರವಾಗಿ ಇದುವರೆಗೂ ಸೋನು ಸೂದ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ರಾಮ್‌ ಕದಂ ಎನ್ನುವವರು, ಕಂಗನಾ ಬಳಿಕ ಮಹರಾಷ್ಟ್ರ ಸರ್ಕಾರ ಈಗ ಸೂನು ಸೂದ್‌ ಅವರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top