fbpx
ಸಮಾಚಾರ

ಜನವರಿ 09: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 9, 2021 ಶನಿವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ 7:16 pm
ನಕ್ಷತ್ರ : ವಿಶಾಖ 12:32 pm
ಯೋಗ : ಶೂಲ 3:01 pm
ಕರಣ : ಬಾವ 8:28 am ಬಾಲವ 7:16 pm

Time to be Avoided
ರಾಹುಕಾಲ : 9:37 am – 11:02 am
ಯಮಗಂಡ : 1:51 pm – 3:16 pm
ದುರ್ಮುಹುರ್ತ : 6:48 am – 7:33 am, 7:33 am – 8:18 am
ವಿಷ : 4:15 pm – 5:44 pm
ಗುಳಿಕ : 6:48 am – 8:12 am

Good Time to be Used
ಅಮೃತಕಾಲ : 1:10 am – 2:39 am
ಅಭಿಜಿತ್ : 12:04 pm – 12:49 pm

Other Data
ಸೂರ್ಯೋದಯ : 6:44 am
ಸುರ್ಯಾಸ್ತಮಯ : 6:09 pm
ರವಿರಾಶಿ : ಧನುಸ್
ಚಂದ್ರರಾಶಿ : ತುಲ upto 06:57

 

 

 

ಮೇಷ (Mesha)

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಮೊದಲು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಕೌಟುಂಬಿಕವಾಗಿ ಉತ್ತಮ ದಿನ. ಮಕ್ಕಳ ಆಟ-ಪಾಠಗಳು ಮನಸ್ಸಿಗೆ ಮುದ ನೀಡುವುದು. ಆರ್ಥಿಕ ಸ್ಥಿತಿ ಉತ್ತಮ.

 

 

ವೃಷಭ (Vrushabha)

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬರಬೇಕಾಗಿದ್ದ ಬಾಕಿ ಹಣವು ಇಂದು ನಿಮ್ಮ ಕೈಸೇರುವುದು. ಸ್ವಂತ ಬಲದಿಂದಲೇ ಹೊಸತನ್ನು ಕರಗತ ಮಾಡಿಕೊಳ್ಳುವಿರಿ. ಇದರ ಬಗ್ಗೆ ಆತ್ಮಾಭಿಮಾನವಿರಲಿ. ಅಹಂಕಾರ ಬೇಡ.

 

ಮಿಥುನ (Mithuna)

ಧನ ನಷ್ಟವಾಗುವ ಸಂಭವವಿದೆ. ಎಚ್ಚರದಿಂದ ಇರಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸದಿರಿ. ಸಂಗಾತಿಯ ಮಾತಿಗೆ ಬೆಲೆಯನ್ನು ನೀಡುವುದರಿಂದ ಒಳಿತಾಗುವುದು.

 

ಕರ್ಕ (Karka)

ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡಾ ಪೂರ್ಣಗೊಳ್ಳಲಿವೆ. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗುವುದು.

 

ಸಿಂಹ (Simha)

ಶತ್ರುಗಳು ಈ ದಿನ ಮಿತ್ರರಾಗುವರು. ಬಾಕಿ ಬರಬೇಕಾಗಿದ್ದ ಹಣ ಕೈಸೇರುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನ ಉತ್ತಮವಾಗಿದ್ದು ನೆಮ್ಮದಿಯ ದಿನ .

 

ಕನ್ಯಾರಾಶಿ (Kanya)

ಧಾರ್ಮಿಕ ಕಾರ್ಯಕಲಾಪಗಳಲ್ಲಿ ಉದಾಸೀನತೆ ತೋರುವುದು. ಎಲ್ಲಾ ವಿಷಯಕ್ಕೂ ವಿನಾಕಾರಣ ಕೋಪಗೊಳ್ಳುವಿರಿ. ಆದಷ್ಟು ತಾಳ್ಮೆಯಿಂದಿರಿ. ಎಲ್ಲದಕ್ಕೂ ಒಂದು ಶುಭಕಾಲ ಎಂಬುದು ಬರುತ್ತದೆ. ಧೈರ್ಯ ಹೀನರಾಗದಿರಿ.

 

ತುಲಾ (Tula)

ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸ ತರುತ್ತವೆ. ಬರಬೇಕಾಗಿದ್ದ ಹಣಕಾಸು ಒದಗಿ ಬರುವುದು. ಗುರುವಿನ ಆಶೀರ್ವಾದದಿಂದ ಮನಸ್ಸು ಪ್ರುಲ್ಲವಾಗುವುದು. ಸಂಗಾತಿಯ ಸಹಕಾರ ನಿಮಗೆ ಅನುಕೂಲವಾಗುವುದು.

 

ವೃಶ್ಚಿಕ (Vrushchika)

ನಿಮ್ಮ ಮುಂದಿರುವ ಜವಾಬ್ದಾರಿ ಬಹು ಮಹತ್ತರವಾದದ್ದು. ಅದನ್ನು ನೀವು ಸಲೀಸಾಗಿ ನಿಭಾಯಿಸುವಿರಿ. ಅಕ್ಕಪಕ್ಕದವರು, ನಿಮ್ಮ ಸ್ನೇಹಿತರು ಇದನ್ನು ಕಂಡು ಆಶ್ಚರ್ಯ ಚಕಿತರಾಗುವರು. ಆರ್ಥಿಕ ಸ್ಥಿತಿ ಉತ್ತಮ.

 

ಧನು ರಾಶಿ (Dhanu)

ಹೆದರುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ನೆನಪಿಸಿಕೊಂಡು ಕಾರ್ಯ ಪ್ರವತ್ತರಾಗಿರಿ. ಸಂತೋಷದ ಕೂಟಗಳಿಗೆ ಹಣ ಖರ್ಚು ಮಾಡುವ ಪ್ರಮೇಯ ಒದಗಿ ಬರುವುದು.

 

ಮಕರ (Makara)

ಈ ದಿನ ಪತಿಪತ್ನಿಯರಲ್ಲಿ ಗಾಢವಾದ ಪ್ರೀತಿ ಹೊರಹೊಮ್ಮುವುದು. ಈ ದಿನ ಸಂತಸ, ಸಂಭ್ರಮದಿಂದ ಕಾಲ ಕಳೆಯುವಿರಿ.

 

ಕುಂಭರಾಶಿ (Kumbha)

ಕೆಲಸಗಾರರೊಂದಿಗೆ ಸ್ನೇಹದಿಂದ ವರ್ತಿಸಿರಿ. ಮೃದು ಮಾತುಗಳಿಂದ ಅವರನ್ನು ಗೆಲ್ಲುವ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಿರಿ. ಆಗ ನಿಮಗೆ ಸಾಕಷ್ಟು ಅನುಕೂಲವಾಗುವುದು. ಪ್ರತಿಫಲದ ಬಗ್ಗೆ ಯೋಚಿಸದೆ ಕಾರ್ಯಪ್ರವೃತ್ತರಾಗಿರಿ.

 

ಮೀನರಾಶಿ (Meena)

ಕಷ್ಟ ಬಂದಿದೆಯೆಂದು ಕುಗ್ಗದಿರಿ. ಸ್ನೇಹಿತರ ಸಹಾಯ ಹಸ್ತ ನಿಮ್ಮ ಬೆನ್ನಿಗಿದೆ. ಧೈರ್ಯದಿಂದ ಮುನ್ನುಗ್ಗಿರಿ. ಯಶಸ್ಸು ನಿಮ್ಮದಾಗುವುದು. ಹಣವು ಕೈಸೇರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top